ಕಾರಿನ ಗ್ಲಾಸ್‌ಗಳು ಪುಡಿಪುಡಿ 
ಜಿಲ್ಲೆ

ಲಾರಿ ಟೈರ್ ಸ್ಫೋಟಕ್ಕೆ ಕಾರುಗಳ ಗ್ಲಾಸ್ ಪುಡಿಪುಡಿ

ಕೊಳ್ಳೇಗಾಲ: ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಮಣ್ಣು ತುಂಬಿದ ಟಿಪ್ಪರ್ ಲಾರಿಯ ಟೈರ್ ಸ್ಫೋಟಗೊಂಡ ಪರಿಣಾಮ ಮೂರು ಕಾರುಗಳ ಗ್ಲಾಸ್‌ಗಳು ಪುಡಿಪುಡಿಯಾಗಿದೆ.

ಪಟ್ಟಣದ ಬಸ್ ನಿಲ್ದಾಣ ಸಮೀಪವಿರುವ ವಿಜಯಲಕ್ಷ್ಮೀ ಲಾಡ್ಜ್ ಎದುರು ನಿಂತಿದ್ದ ಮಂಜು, ರಾಜ್ ಬಯೋ ಆಗ್ರೋನಿಕ್ಸ್ ಕಂಪನಿಯ ಮಲ್ಲಿಕಾರ್ಜುನಸ್ವಾಮಿ ಹಾಗೂ ಹೋಟೆಲ್ ಹೊಂದಕ್ಕೆ ಆಗಮಿಸಿದ ವ್ಯಕ್ತಿಯೊಬ್ಬರಿಗೆ ಸೇರಿದ ಕಾರಿನ ಗ್ಲಾಸ್‌ಗಳು ಪುಡಿಪುಡಿಯಾಗಿವೆ.

ಇಲ್ಲಿನ ಕೊಂಗಳಕೆರೆ ಅಭಿವೃದ್ಧಿಗಾಗಿ ಮಣ್ಣು ತುಂಬಿಕೊಂಡು ಲಾರಿ ಹೋಗುತ್ತಿದ್ದು, ಬಸ್ ನಿಲ್ದಾಣದ ಮಲ್ಲಯ್ಯ ವೃತ್ತದಲ್ಲಿ ಟೈರ್ ಏಕಾಏಕಿ ಸಿಡಿದಿದೆ. ಸ್ಫೋಟದ ಶಬ್ದಕ್ಕೆ ಜನರು ಗಾಬರಿಗೊಂಡಿದ್ದಾರೆ. ಅಲ್ಲದೆ ಆ ರಸ್ತೆಯಲ್ಲಿರುವ ಹೋಟೆಲ್, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳ ಒಳಗಿದ್ದ ಜನರು ಹೊರ ಬಂದಿದ್ದಾರೆ.