ತಿಪಟೂರು: ಅಜಾಗರೂಕ ಚಾಲನೆಯಿಂದ ಗೃಹಿಣಿ ಸಾವಿಗೆ ಕಾರಣನಾದ ಲಾರಿ ಚಾಲಕನಿಗೆ 6 ತಿಂಗಳು ಸಜೆ ಮತ್ತು ದಂಡ ವಿಧಿಸಲಾಗಿದೆ. 2019ರ ನವಂಬರ್ 26ರಂದು ನಗರದ ಕಲ್ಪತರು ಮಾಂಟೆಸ್ಸೊರಿ ಶಾಲೆ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಗಳು ಪೂಜಾರೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಬಿ.ಎಸ್.ಭಾಗ್ಯಶ್ರೀ ಎಂಬುವವರಿಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಭಾಗ್ಯಶ್ರೀ ಸ್ಥಳದಲ್ಲೇ ಮೃತಪಟ್ಟಿದ್ದರು. ಮಗಳಿಗೆ ಸಣ್ಣ, ಪುಟ್ಟ ಗಾಯಗಳಾಗಿತ್ತು. ದುರಂತಕ್ಕೆ ಲಾರಿ ಚಾಲಕನ ಅಜಾಗರೂಕತೆ ಮತ್ತು ರ್ನಿಲಕ್ಷ$್ಯವೇ ಕಾರಣ ಎಂದು ನ್ಯಾಯಾಲಯದಲ್ಲಿ ಸಾಬೀತಾಗಿದ್ದರಿಂದ ನಗರದ ಹಿರಿಯ ದಿವಾನಿ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶರಾದ ಸಿ.ಎಪ್. ಮಹಮದ್ ಅರೀಫುಲ್ಲಾ. 6 ತಿಂಗಳ ಜೈಲು ಶಿೆ ಮತ್ತು 6,500 ರೂ. ದಂಡ ವಿಧಿಸಿ ಡಿ.5ರಂದು ತೀರ್ಪು ಪ್ರಕಟಿಸಿದ್ದಾರೆ. ಆಗಿನ ತನಿಖಾಧಿಕಾರಿಗಳಾಗಿದ್ದ ಸಿ.ಪಿ.ನವೀನ್ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಶಿವಬಸಪ್ಪ ಎಸ್. ಹುಕ್ಕೇರಿ ವಾದ ಮಂಡಿಸಿದ್ದರು.