ಜಿಲ್ಲೆ

ಲಾಭದಲ್ಲಿ ಯರಗಟ್ಟಿ ಅರ್ಬನ್​ ಬ್ಯಾಂಕ್​

ಯರಗಟ್ಟಿ: ಅರವತ್ಮೂರು ವರ್ಷಗಳಿಂದ ಸಣ್ಣ ವ್ಯಾಪಾರಿಗಳು ಹಾಗೂ ರೆತರಿಗೆ ಸಾಲ ಒದಗಿಸುತ್ತ ಮುನ್ನಡೆಯುತ್ತಿರುವ ಯರಗಟ್ಟಿ ಅರ್ಬನ್​
ಬ್ಯಾಂಕ್​ ಪ್ರಗತಿಪಥದತ್ತ ಸಾಗುತ್ತಿದೆ ಎಂದು ಸಂದ ಅಧ್ಯ ಮಹಾಂತೇಶ ಜಕಾತಿ ಹೇಳಿದರು.

ಇಲ್ಲಿನ ಯರಗಟ್ಟಿ ಅರ್ಬನ್​ ಬ್ಯಾಂಕಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ಮುರಗೋಡದ ಲಿಂ. ಮಹಾಂತ ಶಿವಯೋಗಿಗಳ ಅಮೃತಹಸ್ತದಿಂದ ಪ್ರಾರಂಭವಾದ ನಮ್ಮ ಬ್ಯಾಂಕ್​ ಠೇವಣಿ ಸಂಗ್ರಹಣೆ, ಸಾಲ ವಿತರಣೆ, ಲಾಭದ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಕಟಬಾಕಿ ಸಾಲದ ಪ್ರಮಾಣ ಇಳಿಕೆಯಾಗಿದೆ. ಈ ವರ್ಷ 54 ಲ ರೂ. ನಿವ್ವಳ ಲಾಭ ಪಡೆದಿದೆ. ಇದಕ್ಕೆ ಕಾರಣ ಬ್ಯಾಂಕ್​ ಗ್ರಾಹಕರ ನಿಯಮಾನುಸಾರ ವ್ಯವಹಾರ ಹಾಗೂ ಸಿಬ್ಬಂದಿ ಪರಿಶ್ರಮ ಮುಖ್ಯವಾಗಿದೆ ಎಂದರು.

ಬ್ಯಾಂಕಿನ ಉಪಾಧ್ಯ ಎಚ್​.ಎಸ್​. ಗಂಗರಡ್ಡಿ, ನಿರ್ದೇಶಕರಾದ ಎಂ.ಡಿ. ಜಕಾತಿ, ಎಸ್​.ಎಸ್​. ಬಾಳಿ, ಸಿ.ಸಿ. ಹಾದಿಮನಿ, ಯು.ವಿ. ಇಟ್ನಾಳ, ಎಂ.ಜಿ. ತಾಂವಶಿ, ಬಿ.ಎಸ್​. ತಡಸಲೂರ, ಎಸ್​.ಬಿ. ಬೆಲ್ಲದ, ಬಿ.ಎಸ್​. ಪಟ್ಟಣಶೆಟ್ಟಿ, ಎನ್​. ಬಿ. ಚೌಡಪ್ಪನವರ, ಎಸ್​.ಎ. ದಂಡೆನ್ನವರ, ಎ್​.ಎಚ್​. ಕಾಮೋಶಿ, ಎಸ್​.ಎಸ್​. ಯರಗಣವಿ,
ಆರ್​.ಆರ್​. ವಾಲಿ, ಆಡಳಿತ ಸಲಹೆಗಾರ ಬಿ.ಎಂ. ರಾಯರ, ವ್ಯವಸ್ಥಾಪಕ ಎಸ್​. ಎ. ಮೊರಬದ, ಸಿಬ್ಬಂದಿ ಇತರರು ಇದ್ದರು.