ಜಿಲ್ಲೆ

ಲಾಡಿ ಡಿಕ್ಕಿಯೊಡೆದು ಅಪರಿಚಿತ ಸಾವು

ಮಂಜುನಾಥ ತಿಮ್ಮಯ್ಯ

ಮೈಸೂರು: ಮೈಸೂರು-ಹುಣಸೂರು ಹೆದ್ದಾರಿಯಲ್ಲಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಅಪರಿಚಿತ ಮೃತಪಟ್ಟಿದ್ದಾರೆ.

ಹೂಟಗಳ್ಳಿ ಸಮೀಪದ ಡಾಲ್ಫಿನ್ ಬೇಕರಿ ಬಳಿ ಶನಿವಾರ ಸುಮಾರು 50 ವರ್ಷದ ವ್ಯಕ್ತಿ ರಸ್ತೆ ದಾಟುವಾಗ ಹಿನಕಲ್ ಗ್ರೇಟರ್ ಸಪರೇಟರ್ ಕಡೆಯಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ.

ಪರಿಣಾಮ ತಲೆಗೆ ಬಲವಾದ ಪೆಟ್ಟು ಬಿದ್ದು ಪಾದಚಾರಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ವಿವಿ ಪುರಂ ಸಂಚಾರ ಠಾಣೆ ಪೊಲೀಸರು, ಲಾರಿ ಚಾಲಕನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.