ಚಾಮರಾಜನಗರ : ಯಳಂದೂರು ಪಟ್ಟಣದ ಬಳೇಪೇಟೆ ಸರ್ಕಲ್‌ನಲ್ಲಿ ಅಕ್ರಮವಾಗಿ ಕೇರಳ ಲಾಟರಿ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ.
ಬಳೇಪೇಟೆಯ ಪುಟ್ಟಸ್ವಾಮಿ ಎಂಬಾತ ಸಾರ್ವಜನಿಕ ಸ್ಥಳದಲ್ಲಿ ಲಾಟರಿ ಮಾರುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ಚಂದ್ರಹಾಸನಾಯಕ್ ನೇತೃತ್ವದ ಪೊಲೀಸರ ತಂಡ ದಾಳಿ ಮಾಡಿದೆ.
- ಈ ವೇಳೆ ಪುಟ್ಟಸ್ವಾಮಿ ಕೇರಳ ರಾಜ್ಯದ 48 ಲಾಟರಿ ಟಿಕೆಟ್ ಇಟ್ಟುಕೊಂಡು ಮಾರಾಟಕ್ಕೆ ಯತ್ನಿಸುತ್ತಿದ್ದ. ಈ ಲಾಟರಿ ಮೌಲ್ಯ 1,920 ರೂ.ಗಳಾಗಿದೆ. ಇದರೊಂದಿಗೆ ಲಾಟರಿ ಮಾರಾಟ ಮಾಡಿದ್ದ ನಗದು ಹಣ 250 ರೂ.ಗಳನ್ನು ವಶಪಡಿಸಿಕೊಂಡು ದೂರು ದಾಖಲಿಸಿಕೊಂಡು ಕ್ರಮ ವಹಿಸಲಾಗಿದೆ.