ಜಿಲ್ಲೆ

ಲಾಕ್ಡೌನ್ ಉಲ್ಲಂಘಿಸಿದ 303 ವಾಹನ ವಶ

ಕಲಬುರಗಿ: ಲಾಕ್ಡೌನ್ ನಿಯಮ ಮತ್ತು ನಿಷೇಧಾಜ್ಞೆ ಉಲ್ಲಂಘಿಸಿ ನಗರದಲ್ಲಿ ಓಡಾಡುತ್ತಿದ್ದ 303ಕ್ಕೂ ಹೆಚ್ಚಿನ ಬೈಕ್, ಕಾರು, ಆಟೋ ಇತರ ವಾಹನಗಳನ್ನು ಶುಕ್ರವಾರ ವಶಪಡಿಸಿಕೊಂಡ ಪೊಲೀಸರು, ಟೀ ಮಾರುತ್ತಿದ್ದ 7 ಜನರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಡಿ.ಕಿಶೋರಬಾಬು ತಿಳಿಸಿದ್ದಾರೆ.
ಕರೊನಾಕ್ಕೆ ಇಬ್ಬರು ಬಲಿಯಾದ ಬೆನ್ನಲ್ಲೇ ಶುಕ್ರವಾರ ಮತ್ತೊಂದು ಪಾಸಿಟವ್ ಕೇಸ್ ಪತ್ತೆಯಾಗಿದ್ದರಿಂದ ಪೊಲೀಸರು ಬಂದೋಬಸ್ತ್ ಇನ್ನಷ್ಟು ಟೈಟ್ ಮಾಡಿದ್ದು, ದಿನವಿಡೀ ವಿವಿಧೆಡೆ ಕಾರ್ಯಾಚರಣೆ ನಡೆಸಿ ಕೆಲವರಿಗೆ ಬೆತ್ತದ ರುಚಿ ತೋರಿಸಿದರು.
ನಗರದಲ್ಲಿ ಇದುವರೆಗೆ ವಶಪಡಿಸಿಕೊಂಡಿರುವ ವಾಹನಗಳ ಸಂಖ್ಯೆ 3200 ದಾಟಿದ್ದು, ಇವುಗಳನ್ನು ಪೊಲೀಸ್ ಮೈದಾನದ ಹೆಲಿಪ್ಯಾಡ್ನಲ್ಲಿ ನಿಲ್ಲಿಸಲಾಗಿದೆ. ಲಾಕ್ಡೌನ್ ಮುಗಿಯುವವರೆಗೆ ಬಿಡುವುದಿಲ್ಲ.

ಚಹಾ ಮಾರುತ್ತಿದ್ದ ಏಳು ಜನರ ಸೆರೆ
ಲಾಕ್ಡೌನ್ ಜಾರಿಯಲ್ಲಿದ್ದರೂ ಮಿಜಗುರಿ, ಯಾದುಲ್ಲಾ ಕಾಲನಿ ಇತರ ಕಡೆ ಚಹಾ ವ್ಯಾಪಾರ ಮಾಡುತ್ತಿದ್ದ 7 ಜನರನ್ನು ಚೌಕ್ ಪೊಲೀಸರು ಬಂಧಿಸಿದ್ದಾರೆ. ಮಿಜಗುರಿಯ ಮೈನೂದ್ದೀನ್ ಗುಡೂಮಿಯಾ (32), ಖೂಬಾ ಪ್ಲಾಟ್ನ ಪ್ರಸಾದ್ ಕುಲಕಣರ್ಿ (45), ಆಶ್ರಯ ಕಾಲನಿಯ ಶರಣು ಮಾಗರ (25), ಕಾಶೀನಾಥ ಪೂಜಾರಿ (24), ಶಹಾಬಜಾರ್ ನಾಕಾದ ವಿಠ್ಠಲ್ ಬಾಳು ಗೌಳಿ (26), ಗಡಂಗ ಮೋಮಿನಪುರದ ಫಯಾಜ್ಅಲಿ ಅಬ್ಬಾಸ್ ಅಲಿ (19), ಯಾದುಲ್ಲಾ ಕಾಲನಿಯ ಇಮ್ರಾನ್ ಅಹ್ಮದ್ ಲಾಡ್ಲೆಸಾಬ್ (19) ಬಂಧಿತರು. ಇನ್ಸ್ಪೆಕ್ಟರ್ ಶಕೀಲ್ ಅಂಗಡಿ, ಎಎಸ್ಐ ನಿಸಾರ್ ಅಹ್ಮದ್ ಮತ್ತು ಸಿಬ್ಬಂದಿ ಪೆಟ್ರೋಲಿಂಗ್ ಮಾಡುತ್ತಿದ್ದಾಗ ನಿಯಮ ಉಲ್ಲಂಘಿಸಿದ್ದನ್ನು ಕಂಡು ದಾಳಿ ನಡೆಸಲಾಗಿದೆ. ಚನ್ನವಿರ ನಗರದಲ್ಲಿ ವಾಜೀದ್ ಅಹ್ಮದ್ ಎಂಬಾತ ಪರಾರಿಯಾಗಿದ್ದು, ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.