ಜಿಲ್ಲೆ

ಲಸಿಕೆವಂಚಿತ ಮಕ್ಕಳಿಗೆ ಇಂದ್ರಧನುಷ್ ಕೊಡಿಸಿ

ಕಲಬುರಗಿ : ವಿವಿಧ ರೋಗ ನಿರೋಧಕ ಲಸಿಕೆಗಳಿಂದ ವಂಚಿತವಾಗಿರುವ ಐದು ವರ್ಷದೊಳಗಿನ ಮಕ್ಕಳನ್ನು ಗುರುತಿಸಿ ವ್ಯಾಕ್ಸಿನ್ ನೀಡಲು ಇಂದ್ರಧನುಷ್ ಅಭಿಯಾನ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಸಲಹೆ ನೀಡಿದರು.

ರಿಂಗ್‌ರೋಡ್‌ನ ಶಿವಾಜಿನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ದುಬೈ ಕಾಲೋನಿ ಸರ್ಕಾರಿ ಯುನಾನಿ ಆಸ್ಪತ್ರೆಗಳಲ್ಲಿ ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹನಿ ಹಾಕುವ ಮೂಲಕ ಇಂದ್ರಧನುಷ್ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿದ ಅವರು, ಜಿಲ್ಲೆಯಲ್ಲಿ ಮೂರು ಹಂತದಲ್ಲಿ ಲಸಿಕೆ ನೀಡಲಾಗುತ್ತಿದೆ. ಮೊದಲನೇ ಸುತ್ತು ಆ.೭ರಿಂದ ೧೨, ಎರಡನೇ ಸುತ್ತು ಸೆ.೧೧ರಿಂದ ೧೬ ಮತ್ತು ಮೂರನೇ ಸುತ್ತು ಅ.೯ರಿಂದ ೧೪ರವರೆಗೆ ಲಸಿಕಾ ಅಭಿಯಾನ ನಡೆಸಲಾಗುವುದು. ಈ ವೇಳೆ ಪಾಲಕರು ಮಕ್ಕಳನ್ನು ಶಾಲೆ ಇಲ್ಲವೆ ಸಮೀಪದ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದು ಲಸಿಕೆ ಕೊಡಿಸಬೇಕೆಂದು ಕೋರಿದರು.

ಜಿಪಂ ಸಿಇಒ ಭನ್ವರ್‌ಸಿಂಗ್ ಮೀನಾ ಮಾತನಾಡಿ, ತಾಯಿ ಕಾರ್ಡ್ ಎಲ್ಲ ಪಾಲಕರು ಕಡ್ಡಾಯವಾಗಿ ಪಡೆಯಬೇಕು. ಮಕ್ಕಳ ಬೆಳವಣಿಗೆಗೆ ಪೌಷ್ಟಿಕ ಲಸಿಕೆಗಳ ಸಂಪೂರ್ಣ ಮಾಹಿತಿಯಿದ್ದು, ಪ್ರತಿಯೊಬ್ಬರೂ ತಪ್ಪದೆ ವಯಸ್ಸಿಗೆ ಅನುಗುಣ ಲಸಿಕೆಯನ್ನು ಸಮೀಪದ ಸರ್ಕಾರಿ ಆಸ್ಪತ್ರೆ ಅಥವಾ ಅಂಗನವಾಡಿ ಕೇಂದ್ರಗಳಲ್ಲಿ ಉಚಿತವಾಗಿ ಕೊಡಿಸಬಹುದು ಎಂದರು.

ಜಿಲ್ಲಾ ಸರ್ಜನ್ ಡಾ.ಅಂಬಾರಾಯ ರುದ್ರವಾಡಿ, ಆಡಳಿತಾಧಿಕಾರಿ ವೈದ್ಯಾಧಿಕಾರಿ ಡಾ.ವಿನೋದ ಉಪಳಾಂವಕರ್, ಕ್ಷಯರೋಗ ನಿರ್ಮೂಲನೆ ಅಧಿಕಾರಿ ಡಾ.ಚಂದ್ರಕಾAತ ನರಿಬೋಳ, ಪ್ರಾಚಾರ್ಯ ರವಿಕಾಂತಿ ಖ್ಯಾತನಾಳ, ಸುರೇಶ ಮೇಕಿನ ಇತರರಿದ್ದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಜಶೇಖರ ಮಾಲಿ ಸ್ವಾಗತಿಸಿದರು. ಉತ್ತಮ ಗುಣಮಟ್ಟದ ಆಸ್ಪತ್ರೆಯೆಂದು ರಾಷ್ಟç ಮಟ್ಟಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ಆಡಳಿತ ವೈದ್ಯಾಧಿಕಾರಿ ಡಾ.ಸಂಧ್ಯಾರಾಣಿ ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.