ಮಹಾಲಿಂಗಪುರದಲ್ಲಿ ಲವ್ ಜಿಹಾದ್ ಕುರಿತು ಜಾಗೃತಿ ಅಭಿಯಾನದ ಕರಪತ್ರಗಳನ್ನು ವಿತರಿಸಲಾಯಿತು. ರವಿ ಜವಳಗಿ, ಸಚಿನ್ ಕಲ್ಮಾಡಿ, ಬಸವರಾಜ ಗಿರಿಸಾಗರ, ರಾಘು ಗರಗಟ್ಟಿ, ಸಂತೋಷ ಹಜಾರೆ ಇತರರಿದ್ದರು. 
ಜಿಲ್ಲೆ

ಲವ್ ಜಿಹಾದ್ ಜಾಗೃತಿ ಕರಪತ್ರ ವಿತರಣೆ

ಮಹಾಲಿಂಗಪುರ: ವಿಶ್ವ ಹಿಂದು ಪರಿಷತ್, ಭಜರಂಗದಳ ಹಾಗೂ ಹಿಂದು ಜಾಗರಣಾ ವೇದಿಕೆ ಮಹಾಲಿಂಗಪುರ ವತಿಯಿಂದ ಪಟ್ಟಣದ ಮಹಾಲಿಂಗೇಶ್ವರ ದೇವಸ್ಥಾನ ಮುಂಭಾಗ ಬುಧವಾರ ಹಿಂದು ಹೆಣ್ಣು ಮಕ್ಕಳ ರಕ್ಷಣೆಗಾಗಿ ಲವ್ ಜಿಹಾದ್ ಕುರಿತು ಜಾಗೃತಿ ಅಭಿಯಾನದ ಕರಪತ್ರಗಳನ್ನು ವಿತರಿಸಲಾಯಿತು.

ಯುಗಾದಿ ಪ್ರಯುಕ್ತ ಸ್ಥಳೀಯ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಜಟೋತ್ಸವ ದರ್ಶನಕ್ಕೆ ಆಗಮಿಸಿದ್ದ ಸಾವಿರಾರು ಮಹಿಳೆಯರು, ಯುವತಿಯರು ಸೇರಿ ಎಲ್ಲ ಭಕ್ತರಿಗೆ ಕರಪತ್ರಗಳನ್ನು ವಿತರಿಸಿ ಅರಿವು ಮೂಡಿಸಲಾಯಿತು.

ಸಂಘಟನೆಗಳ ಮುಖಂಡರಾದ ರವಿ ಜವಳಗಿ, ಸಚಿನ್ ಕಲ್ಮಾಡಿ, ಬಸವರಾಜ ಗಿರಿಸಾಗರ, ರಾಘು ಗರಗಟ್ಟಿ, ಸಂತೋಷ ಹಜಾರೆ, ಅಭಿಷೇಕ ಲಮಾಣಿ, ಅಕ್ಷಯ ಜಲ್ಲಿ, ಸಾಗರ ಸಿಂಧೆ, ಚೆನ್ನು ಆರೆಗಾರ, ಮಹಾಲಿಂಗ ಜಮಖಂಡಿ, ತಮ್ಮಣ್ಣ ಆದೆಪ್ಪನವರ, ಈರಣ್ಣ ಹುನಶ್ಯಾಳ, ಮಂಜು ಭಾವಿಕಟ್ಟಿ, ಸಿದ್ದು ಮೇಟಿ, ಬಸು ಹುರಕಡ್ಲಿ, ಗಜಾನನ ನುಚ್ಚಿ, ಸಚಿನ ವಂದಾಲ, ರೇವಣೇಶ ಇಟಕಣ್ಣವರ ಇದ್ದರು.