ಜಿಲ್ಲೆ

ಲಲ್ಲೂಸಿಂಗ್ ಹೇಳಿಕೆ ಆತಂಕಕಾರಿ

ಚಿತ್ರದುರ್ಗ: ದೇಶದ ಸಂವಿಧಾನ ಬದಲಿಸಲು 3ನೇ 2ರಷ್ಟು ಬೆಂಬಲ ಕೊಡಿ ಎಂದಿರುವ ಪೈಜಾಬಾದ್ ಬಿಜೆಪಿ ಶಾಸಕ ಲಲ್ಲೂಸಿಂಗ್ ಅವರ ಹೇಳಿಕೆ ಆತಂಕಕಾರಿ ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ಭಾರತದಲ್ಲಿ ಯಾವ ಪಕ್ಷ ಆಡಳಿತ ನಡೆಸಬೇಕೆಂಬುದು ಮುಖ್ಯವಲ್ಲ. ಸಂವಿಧಾನ ದೇಶ ಆಳಬೇಕೆನ್ನುವುದು ಜನಸಾಮಾನ್ಯರ ಒತ್ತಾಸೆಯಾಗಿದೆ ಎಂದು ಸೋಮವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಸಾಕ್ಷಾತ್ ಅಂಬೇಡ್ಕರ್ ಅವರೇ ಬಂದರು ಸಂವಿಧಾನ ಬದಲಿಸುವುದಕ್ಕೆ ಆಗುವುದಿಲ್ಲವೆಂದ ಮೇಲೆಯೂ ಲಲ್ಲೂಸಿಂಗ್ ಹೇಳಿಕೆ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ತಿಳಿಸಿದ್ದಾರೆ.