ಚಿಕ್ಕಮಗಳೂರು: ಇಲ್ಲಿನ ಲಯನ್ಸ್ ಇಂಟರ್‌ನ್ಯಾಷನಲ್ ಮತ್ತು ಲಯನ್ಸ್ ಸಂಸ್ಥೆ ವತಿಯಿಂದ ಸುವರ್ಣ ಮಹೋತ್ಸವ ೨೦೨೩-೨೪ರ ಸವಿ ನೆನಪಿಗಾಗಿ ನವೀಕರಿಸಿದ ಲಯನ್ಸ್ ಸುವರ್ಣ ಭವನದ ಉದ್ಘಾಟನೆಯನ್ನು ಮಾ. ೧೩ರಂದು ಗುರುವಾರ ಬೆಳಿಗ್ಗೆ ೧೧.೩೦ಕ್ಕೆ ಮಧುವನ ಲೇಔಟ್‌ನಲ್ಲಿರುವ ಲಯನ್ಸ್ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಲಯನ್ಸ್ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಡಾ.ಜೆ.ಪಿ ಕೃಷ್ಣೇಗೌಡ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಸಂಸ್ಥೆ ಅಧ್ಯಕ್ಷ ಕೆ. ಪುಷ್ಪರಾಜ್ ವಹಿಸಲಿದ್ದಾರೆ. ಲಯನ್ಸ್ ಜಿಲ್ಲೆ ೩೧೭ಡಿ ಜಿಲ್ಲಾ ಗೌರ್ವನರ್ ಬಿ.ಎಮ್ ಭಾರತಿ ನೂತನ ಭವನವನ್ನು ಉದ್ಘಾಟಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಪ್ರಮುಖರಾದ ಕೃಷ್ಣಾರೆಡ್ಡಿ, ಎಸ್.ರಾಮಚಂದ್ರನ್, ಡಾ.ಮೆಲ್ವಿನ್‌ಡಿಸೋಜ, ಕುಡ್ಪಿ ಅರವಿಂದ್ ಶಣೈ, ಎಚ್.ಎಂ.ತಾರನಾಥ್, ಎಚ್.ಆರ್ ಹರೀಶ್, ಕಿಶೋರ್ ಕುಮಾರ್ ಹೆಗ್ಡೆ, ಎಚ್.ಸಿ ಶಶಿಪ್ರಸಾದ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಲಯನ್ಸ್ ಸಂಸ್ಥೆ ಚಿಕ್ಕಮಗಳೂರಿನಲ್ಲಿ ೧೯೭೪ರಂದು ಆರಂಭಗೊAಡು ಇಂದಿಗೆ ೫೦ ವರ್ಷಗಳು ತುಂಬುತ್ತಿದ್ದು, ತನ್ನ ಉದಾತ್ತ ಸಮಾಜಿಕ ಸೇವೆಯಲ್ಲಿ ಗುರುತಿಸಕೊಂಡಿರುವ ಸಂಸ್ಥೆ. ಕೇವಲ ಅಧಿಕಾರ, ಅಂತಸ್ತು, ನಾಯಕತ್ವ ಹಾಗೂ ನಾಮಫಲಕಗಳಿಗೆ ಸೀಮಿತವಾಗದೆ ನಿಸ್ವಾರ್ಥ ಸೇವೆಯ ಮೂಲಕ ಸಮಾಜದ ಎಲ್ಲ ವರ್ಗದ ಜನರ ಪ್ರೀತಿ, ವಿಶ್ವಾಸ ಪ್ರಶಂಸೆಗಳಿಗೆ ಪಾತ್ರವಾಗಿದೆ ಎಂದು ತಿಳಿಸಿದರು.
ಲಯನ್ಸ್ ಸಂಸ್ಥೆ ಮಧುವನ ಲೇಔಟ್‌ನಲ್ಲಿರುವ ಲಯನ್ಸ್ ಸೇವಾ ಭವನ ಡಾ. ಮೀರಾ ನರಸಿಂಹ ಮಹಾಲೆ ಲಯನ್ಸ್ ವಿಶೇಷ ಚೇತನ ಮಕ್ಕಳ ಶಾಲೆ, ಸಾರ್ವಜನಿಕ ಜಿಲ್ಲಾ ಆಸ್ಪತ್ರೆಯಲ್ಲಿ ಸುಟ್ಟ ಗಾಯಗಳ ವಾರ್ಡ್, ಫಿಜಿಯೋಥೆರಪಿ ಮತ್ತು ಕೃತಕಕಾಲುಗಳ ಜೋಡಣೆ, ವಾಹನ ನಿಲುಗಡೆ ಸೌಲಭ್ಯ ಮತ್ತು ರಕ್ತನಿಧಿ ಕೇಂದ್ರಕ್ಕೆ ಮಂಚಗಳ ಕೊಡುಗೆ, ಅಗಸರ ಬೀದಿಯಲ್ಲಿ ಅಂಗನವಾಡಿ ಕೇಂದ್ರ, ಐಡಿಎಸ್‌ಜಿ ಕಾಲೇಜಿನಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಲಯನ್ಸ್ ಸಂಸ್ಥೆ ಮಾಡುವ ಮೂಲಕ ಸಮಾಜಮುಖಿ ಕಾರ್ಯದಲ್ಲಿ ತೊಡಗಿದೆ ಎಂದರು.
ಅನೇಕ ಸೇವಾ ಕಾರ್ಯಗಳ ಮೂಲಕ ನಿರಂತರ ಸೇವೆಯನ್ನು ಕೈಗೊಳ್ಳುತ್ತಿರುವ ಸಂಸ್ಥೆ ಪ್ರಸ್ತುತ ಸುವರ್ಣ ಮಹೋತ್ಸವ ಸಂಭ್ರಮದಲ್ಲಿದ್ದು, ಸುಮಾರು ೪೦ ಲಕ್ಷ ರೂ. ವೆಚ್ಚದಲ್ಲಿ ವಿಸ್ತೃತ ಕಟ್ಟಡವನ್ನು ನಿರ್ಮಿಸಲಾಗಿದ್ದು, ಇದರಲ್ಲಿ ಸಾರ್ವಜನಿಕ ಉಪಯೋಗಕ್ಕೆ ಹಾಗೂ ವಿಶೇಷ ಚೇತನ ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅನೂಕಲವಾಗಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸುವರ್ಣ ಮಹೋತ್ಸವ ಸಮಿತಿಯ ಕಾರ್ಯದರ್ಶಿ ಎಚ್. ಆರ್ ಹರೀಶ್, ಖಜಾಂಚಿ ಬಿ.ಎನ್ ವೆಂಕಟೇಶ್, ಉಪಾಧ್ಯಕ್ಷ ಜಿ.ರಮೇಶ್, ಲಯನ್ಸ್ ಸಂಸ್ಥೆ ಅಧ್ಯಕ್ಷ ಕೆ. ಪುಷ್ಪರಾಜ್, ಪ್ರಧಾನ ಕಾರ್ಯದರ್ಶಿ ಗೋಪಿಕೃಷ್ಣ, ಎಂ.ಎA.ಗಿರೀಶ್, ಬಾಲಕೃಷ್ಣ, ಶಿವಣ್ಣ, ನಾರಾಯಣಸ್ವಾಮಿ, ಎಂ.ಆರ್.ಕೇಶವಮೂರ್ತಿ ಉಪಸ್ಥಿತರಿದ್ದರು.