ಜಿಲ್ಲೆ

ಲಯನ್ಸ್ ಸಂಸ್ಥೆಯಲ್ಲಿ ಸಂಭ್ರಮಾಚರಣೆ

ಸೋಮವಾರಪೇಟೆ: ದೇಶದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್ ಹಿನ್ನೆಲೆಯಲ್ಲಿ ಇಲ್ಲಿನ ಲಯನ್ಸ್ ಸಂಸ್ಥೆಯ ವತಿಯಿಂದ ಗುರುವಾರ ಜೇಸಿ ವೇದಿಕೆಯಲ್ಲಿ ಸಂಭ್ರಮಾಚರಣೆ ನಡೆಯಿತು. ತಹಸೀಲ್ದಾರ್ ಎಸ್.ಎನ್.ನರಗುಂದ ಮಾತನಾಡಿ, ಗಗನನೌಕೆ 40ದಿನಗಳ ಯಾನದ ಬಳಿಕ ಚಂದ್ರನ ಅಂಗಳಕ್ಕೆ ಇಳಿದಿರುವುದು ಇಸ್ರೋ ವಿಜ್ಞಾನಿಗಳ ಸಾಧನೆ. ಇದು ದೇಶಕ್ಕೆ ದೊಡ್ಡ ಹೆಮ್ಮೆ ಎಂದರು.
ಲಯನ್ಸ್ ಸಂಸ್ಥೆ ಅಧ್ಯಕ್ಷ ಎ.ಎಸ್. ಮಹೇಶ್ ಮಾತನಾಡಿ, ಚಂದ್ರಯಾನದ ಯಶಸ್ಸಿನಿಂದ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವ ಹೆಚ್ಚಾಗಿದೆ. ಇಸ್ರೋದ ಮುಂದಿನ ಯೋಜನೆಗಳು ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಲಿ ಎಂದು ಹಾರೈಸಿದರು.
ಸಂಸ್ಥೆಯ ಪದಾಧಿಕಾರಿಗಳಾದ ರೋಹಿತ್, ಲೀಲಾರಾಂ, ಸಿ.ಕೆ. ಮಲ್ಲಪ್ಪ, ಸಿ.ಕೆ. ಶಿವಕುಮಾರ್, ನಿರ್ವಾಣಿ ಶೆಟ್ಟಿ, ಲಿಯೋ ಕ್ಲಬ್ ಅಧ್ಯಕ್ಷೆ ಪ್ರತೀಕ್ಷಾ, ವಿಶ್ವಮಾನವ ಕುವೆಂಪು ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ವೈ.ಎಸ್. ಧನಾ ಮತ್ತಿತರರು ಇದ್ದರು.