ಕೊಳ್ಳೇಗಾಲ: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಪಟ್ಟಣದ ಲಯನ್ಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಶೇ.83.76ರಷ್ಟು ಫಲಿತಾಂಶ ದೊರೆತಿದೆ.
ವಾಣಿಜ್ಯ ವಿಭಾಗದಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ 4, ಪ್ರಥಮ ದರ್ಜೆಯಲ್ಲಿ 12, ದ್ವಿತೀಯ ದರ್ಜೆಯಲ್ಲಿ 11, ತೃತೀಯ ದರ್ಜೆಯಲ್ಲಿ 3 ವಿದ್ಯಾರ್ಥಿಗಳು ಉತೀರ್ಣರಾಗಿದ್ದಾರೆ. ಇವರಲ್ಲಿ ಉಮೆ ಹಬೀಬ 553, ಪಿ.ಪೂರ್ಣಿಮಾ 528, ಎಸ್.ಶ್ರುತಿ 519, ಎಸ್.ರೇಖಾ 513 ಅಂಕಗಳನ್ನು ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಶೇ.86 ರಷ್ಟು ಫಲಿತಾಂಶ: ವಿಜ್ಞಾನ ವಿಭಾಗದಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ 15, ಪ್ರಥಮ ದರ್ಜೆಯಲ್ಲಿ 38, ದ್ವಿತೀಯ ದರ್ಜೆ 14, ತೃತೀಯ ದರ್ಜೆ ಒಬ್ಬ ವಿದ್ಯಾರ್ಥಿ ತೇರ್ಗಡೆ ಹೊಂದಿದ್ದಾರೆ. ಇವರಲ್ಲಿ ಜಿ.ದಿಗಂತ್ 547, ಎಸ್.ಹರ್ಷಿತಾ 546, ಎಂ.ಮಮತಾ 541, ಎಸ್.ಪುನೀತ 539, ಸರ್ವೇಶ್ 534, ಬಿ.ಕೆ ವೀರು ಪ್ರಜ್ವಲ್ 524, ವೈ.ಸಿ ಮನೀಶ್ ಚಂದ್ರ 523, ಪಿ.ಮಹೇಶ್ 522, ಪಿ.ಕುಶ್ವಂತ್ 519, ಸೈಯದ್ ರೆಹನ್ 519 ,ಎಸ್.ನಿಧಿ 518, ಎಸ್.ಜೀವನ್ 516, ಶಾಲಿನಿ 513, ಎನ್. ನಾಗೇಂದ್ರ 512 ಅಂಕಗಳನ್ನು ಪಡೆದಿದ್ದಾರೆ.
ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು: ವಿಜ್ಞಾನ ವಿಭಾಗದಲ್ಲಿ ಜಿ.ದಿಗಂತ್ 547 (ಶೇ.91), ವಾಣಿಜ್ಯ ವಿಭಾಗದಲ್ಲಿ ಉಮ್ಮೇ ಹಬೀಬ 553 (ಶೇ.92) ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ತೇರ್ಗಡೆಯಾದ ಎಲ್ಲ ವಿದ್ಯಾರ್ಥಿಗಳನ್ನು ಲಯನ್ಸ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವೆಂಕಟೇಶ್, ಖಜಾಂಚಿ ನಾಗರಾಜು ಎಸ್.ಕೊಂಗರಹಳ್ಳಿ, ಲಯನ್ಸ್ ವಿದ್ಯಾ ಸಂಸ್ಥೆಯ ಮಾಜಿ ಕಾರ್ಯದರ್ಶಿ ಜಿ.ಎಸ್.ಎಂ ಪ್ರಸಾದ್, ನಿರ್ದೇಶಕ ಎ.ಡಿ.ಕುಮಾರ ಕೃಷ್ಣ, ಲಯನ್ಸ್ ಚಿಕ್ಕಬಸವಯ್ಯ ಹಾಗೂ ಪ್ರಾಂಶುಪಾಲೆ ವಿನುತ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.