ಹೊನ್ನಾವರ: ಲಯನ್ಸ್ ಕ್ಲಬ್ ಹೊನ್ನಾವರ ಹಾಗೂ ಕಲಭಾಗಕರ ಕಲ್ಯಾಣ ಟ್ರಸ್ಟ್ ಮುಂಬೈ ಸಹಯೋಗದಲ್ಲಿ ಪಟ್ಟಣದ ಶ್ರೀ ದೇವಿ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಉಚಿತ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಗುರುವಾರ ನಡೆಯಿತು.
ಶಿಬಿರ ಉದ್ಘಾಟಿಸಿದ ಶ್ರೀದೇವಿ ಆಸ್ಪತ್ರೆ ಮುಖ್ಯಸ್ಥ ಡಾ. ಚಂದ್ರಶೇಖರ ಶೆಟ್ಟಿ ಮಾತನಾಡಿ, ಲಯನ್ಸ್ ಕ್ಲಬ್ ಬಡವರಿಗೆ ಸಹಾಯ ಮಾಡುತ್ತಿದ್ದು, ಜನರಿಗೆ ಅನುಕೂಲವಾಗುವ ಶಿಬಿರ ಆಯೋಜಿಸಲಾಗಿದೆ. ಈ ಶಿಬಿರದ ಪ್ರಯೋಜನ ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ಉದಯ ನಾಯ್ಕ ಹಾಗೂ ರೇವಣಕರ ಆಸ್ಪತ್ರೆಯ ಜಯದೇವ ಬಳಗಂಡಿ ಮಾತನಾಡಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಎನ್.ಜಿ. ಭಟ್, ಖಜಾಂಚಿ ಶ್ರೀಕಾಂತ ಹೆಗಡೆಕರ್ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ರಾಜೇಶ ಸಾಲೆಹಿತ್ತಲ್, ಸದಸ್ಯರಾದ ವಸಂತ ಪ್ರಭು, ಮಹೇಶ ನಾಯ್ಕ, ಡಿ.ಡಿ. ಮಡಿವಾಳ, ಶೇಖರ ನಾಯ್ಕ, ರೋಷನ್ ಶೇಟ್, ಕುಸುಮಾ ಎಸ್., ಇತರರಿದ್ದರು.