ಕೊಳ್ಳೇಗಾಲ ಪಟ್ಟಣದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಶ್ರೀವಿದ್ಯಾ ಅವರನ್ನು ಸನ್ಮಾನಿಸಲಾಯಿತು. ಎಸ್.ನಾಗರಾಜು ಕೊಂಗರಹಳ್ಳಿ, ಗಂಗಾಧರ್, ಜಿ.ಎಸ್.ಮಹದೇವ ಪ್ರಸಾದ್, ವೆಂಕಟೇಶ್ ಬಾಬು, ಮಹೇಶ್ ಬಾಬು, ಚೇತನ್ ಇದ್ದರು. 
ಜಿಲ್ಲೆ

ಲಯನ್ಸ್ ಕ್ಲಬ್ ಸೇವೆ ಅನನ್ಯ

ಕೊಳ್ಳೇಗಾಲ: ಲಯನ್ಸ್ ಕ್ಲಬ್‌ಗೆ 48 ವಸಂತ ತುಂಬಿದ್ದು, ಸಮಾಜಮುಖಿ ಕಾರ್ಯಗಳಿಂದಾಗಿ ಮನೆ ಮಾತಾಗಿದೆ. ಅಂತೆಯೆ ಕೊಳ್ಳೇಗಾಲ ಲಯನ್ಸ್ ಕ್ಲಬ್ ಸೇವೆ ಅನನ್ಯ ಎಂದು ಲಯನ್ ಜಿಲ್ಲಾ ಪ್ರಾಂತಪಾಲರಾದ ಡಾ.ಶ್ರೀವಿದ್ಯಾ ಹೇಳಿದರು.

ಪಟ್ಟಣದ ಲಯನ್ಸ್ ಕ್ಲಬ್‌ನಲ್ಲಿ ಗುರುವಾರ ಆಯೋಜಿಸಿದ್ದ ಲಯನ್ಸ್ ಜಿಲ್ಲಾ ಪ್ರಾಂತಪಾಲರಾದ ಡಾ.ಶ್ರೀವಿದ್ಯಾ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊಳ್ಳೇಗಾಲದ ಲಯನ್ಸ್ ಕ್ಲಬ್ ಜನ ಸೇವೆಗೆ ಇಂಟರ್‌ನ್ಯಾಷನಲ್ ಅವಾರ್ಡ್ ದೊರೆತಿದೆ ಎಂದು ಮಾಹಿತಿ ನೀಡಿದರು.

ಸರ್ಕಾರಗಳು ಜನರ ಬೇಡಿಕೆಗಳನ್ನು ನೀಗಿಸಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಎನ್‌ಜಿಒಗಳು ಜನರ ಸೇವೆ ಮಾಡಬೇಕು. ಕೆಲಸದಲ್ಲಿ ಬದ್ಧತೆ ಹಾಗೂ ಆತ್ಮ ವಿಶ್ವಾಸ ಕಾಯ್ದುಕೊಂಡರೆ ಏನಾದರೂ ಸಾಧಿಸಬಹುದು ಎಂದರು.

ಲಯನ್ಸ್ ಕ್ಲಬ್ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಸೇವೆ ಮಾಡಿದ್ದು, ಕೋವಿಡ್ ಸಂಕಷ್ಟದಲ್ಲೂ ನೆರವಾಗಿದೆ. ಬಡವರು, ಅಸಹಾಯಕರು, ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡುವುದು ನಮ್ಮ ಉದ್ದೇಶ ಎಂದರು.

ಲಯನ್ಸ್ ಪ್ರಾದೇಶಿಕ ನಿರ್ದೇಶಕ ಮಹೇಂದ್ರ, ಜಿಲ್ಲಾ ಖಜಾಂಚಿ ಗಂಗಾಧರ್, ತಾಲೂಕು ಅಧ್ಯಕ್ಷ ಎಸ್.ನಾಗರಾಜು ಕೊಂಗರಹಳ್ಳಿ, ಕಾರ್ಯದರ್ಶಿ ಮಹೇಶ್ ಬಾಬು, ಖಜಾಂಚಿ ವೆಂಕಟೇಶ್ ಬಾಬು ಜಿ.ಎಲ್.ಟಿ. ಸಂಯೋಜಕ ಜಿ.ಎಸ್.ಮಹದೇವ ಪ್ರಸಾದ್, ವಲಯ ನಿರ್ದೇಶಕ ಚೇತನ್ ಇದ್ದರು.