ಬಾಗಲಕೋಟೆ: ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ದನ ಕೊಬ್ಬು ಕಲಬೆರಕಿ ಮಾಡಲಾಗಿದೆ ಎನ್ನುವ ಆರೋಪಕ್ಕೆ ಸಂಬಂಽಸಿದಂತೆ ಮಾಜಿ ಡಿಸಿಎಂ ಈಶ್ವರಪ್ಪ ಅವರು, ಇದರಲ್ಲಿ ವಿದೇಶಿ ಕ್ರಿಶ್ಚನ್ ಪಾದ್ರಿಗಳ ಷಡ್ಯಂತ ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬಾಗಲಕೋಟೆಯಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಲಡ್ಡು ಪ್ರಸಾದ ಪಡೆದರೆ ಜೀವನ ಸಾರ್ಥಕ ಎಂಬ ಭಾವನೆ ಭಕ್ತರಲ್ಲಿ ಇದೆ. ಆದರೆ, ಈಗ ಲಡ್ಡು ಕಲಬೆರಕಿ ಜಗನ್ ಮೋಹನ್ ರೆಡ್ಡಿ ಕಾಲದಲ್ಲೆ ಯಾಕೆ ಆಯಿತು? ಅವರು ಕನ್ವರ್ಟೆಡ್ ಕ್ರಿಶ್ವಿಯನ್. ಗೊತ್ತಿಲ್ಲದೆ ಮಾಡಿದರಾ? ಲಡ್ಡುದಲ್ಲಿ ಮಿಕ್ಸ್ ಆಗುತ್ತಿದೆ ಎಂದು ಅಲ್ಲಿನ ಅಽಕಾರಿಗಳು ಹೇಳಿದ್ದರು ಎಂದರು.
ದು ಸಮಾಜದ ಮೇಲೆ ಆಗುತ್ತಿರೋ ಈ ಷಡ್ಯಂತ್ರ, ಗಣಪತಿ ಮೆರವಣಿಗೆ, ಲಡ್ಡು ಪ್ರವಾಸ ಇರಬಹುದು, ರಾಷ್ಟ್ರದ ಧ್ವಜಗಳ ಬಗ್ಗೆ ಇರಬಹುದು. ಹೀಗೆ ನಮ್ಮ ದೇಶದಲ್ಲಿ ಎಲ್ಲ ರೂಪದಲ್ಲೂ ಹಿಂದು ಸಮಾಜದ ಮೇಲೆ ಅಕ್ರಮಣ ನಡೆಯುತ್ತಿದೆ. ಈ ಬಗ್ಗೆ ಯತ್ನಾಳ್ ಅವರು ಹೇಳಿಕೆ ಕೊಟ್ಟಿದ್ದಾರೆ. ಆದರೆ, ಅವರನ್ನು ಬಂಽಸಿ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ಯತ್ನಾಳ್ ಬಂಽಸಿ ಎನ್ನುವವರು ಪ್ಯಾಲಿಸ್ಟÊೆನ್ ಧ್ವಜ ಹಾರಿಸಿದವರನ್ನು ಬಂಽಸಿ ಎಂದಿದ್ದಾರಾ ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಆಡಳಿತ ನಡೆಸುವವರು ಇದನ್ನು ಗಮನಿಸಬೇಕು. ಅಂತಾರಾಷ್ಟ್ರೀಯ ದ್ರೋಹಿಗಳು ಹಿಂದು ಸಮಾಜದ ಮೇಲೆ ಷಡ್ಯಂತ್ರ ನಡೆಸಿದ್ದಾರೆ. ಯಾರು ತಲವಾರ್, ಪೆಟ್ರೋಲ್ ಬಾಂಬ್ ಎಸೆಯುತ್ತಾರೋ ಅವರನ್ನು ಎ೧, ಎ೨ ಆರೋಪಿ ಮಾಡುವ ಬದಲಿಗೆ ಗಣಪತಿ ಇಟ್ಟವರನ್ನು ಎ೧, ಎ೨ ಆರೋಪಿ ಮಾಡಿದ್ದಾರೆ. ನಾಗಮಂಗಲ ಗಲಾಟೆಯಲ್ಲಿ ಪೊಲೀಸರು ಪ್ಯಾದೆಗಳಂತೆ ನಿಂತಿದ್ದರು ಎಂದು ಕಿಡಿಕಾರಿದರು.
ಪ್ಯಾಲಿಸ್ಟÊೆನ್ ಧ್ವಜ ಹಿಡಿದು ತಿರುಗಿಸಿದ್ದು ಬರೀ ಬಾಗಲಕೋಟೆ, ಬೆಳಗಾವಿ, ಮಂಗಳೂರ ಮಾತ್ರ ಎಂದುಕೊಳ್ಳಬೇಡಿ. ಎಲ್ಲೆಲ್ಲಿ ಆ ವಿದೇಶಿಯ ಅನೇಕ ದ್ರೋಹಿಗಳಿಗೆ ಶಕ್ತಿ ಇದೆಯೋ ಅಲ್ಲೆಲ್ಲ ಮಾಡುತ್ತಾರೆ. ಇದನ್ನು ಸರ್ಕಾರ ತಡೆಯಬೇಕು. ಸರ್ಕಾರ ಬರೀ ಮುಸ್ಲಿಂರಿಗೆ ನೆಮ್ಮದಿ ಕೊಟ್ಟರೆ ಆಗದು. ಹಿಂದು, ಕ್ರಿಶ್ಚಿಯನ್, ಮುಸ್ಲಿಂ, ಕನ್ನಡಿಗರಿಗೆ ನೆಮ್ಮದಿ ಕೊಡಬೇಕು. ವೈಯಕ್ತಿಕ ಟೀಕೆ, ಟಿಪ್ಪಣಿ ಬಿಟ್ಟು, ಇಂತದ್ದರ ಕಡೆಗೆ ಸಿಎಂ ಗಮನ ಹರಿಸಬೇಕು ಎಂದು ತಿಳಿ ಹೇಳಿದರು.
ವೀರಣ್ಣ ಹಳೇಗೌಡರ, ರಾಜು ಬಿರಾದಾರ, ರುದ್ರಣ್ಣ ಗುಳಗುಳಿ, ಸಿದ್ದರಾಮ ಭಜನೆ ಮತ್ತಿತರರು ಇದ್ದರು.