ಜಿಲ್ಲೆ

ಲಕ್ಷ್ಮೇಶ್ವರ ಎಪಿಎಂಸಿಗೆ ನೀಲಪ್ಪ ಹತ್ತಿ ಅಧ್ಯಕ್ಷ

Gadag

ಲಕ್ಷ್ಮೇಶ್ವರ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮೂರನೇ ಅವಧಿಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ನೀಲಪ್ಪ ಹತ್ತಿ ಅಧ್ಯಕ್ಷರಾಗಿ ಮತ್ತು ಸೋಮಪ್ಪ ಲಮಾಣಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ನೀಲಪ್ಪ ಹತ್ತಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಸೋಮಪ್ಪ ಲಮಾಣಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ನೀಲಪ್ಪ ಅಧ್ಯಕ್ಷ ಹಾಗೂ ಸೋಮಪ್ಪ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಪ್ರಕಟಿಸಿದರು. ಬಿಜೆಪಿ ಪಕ್ಷದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುತ್ತಿದ್ದಂತೆ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.

ಈ ವೇಳೆ ಶಾಸಕ ರಾಮಣ್ಣ ಲಮಾಣಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂಬಣ್ಣ ಬಾಳಿಕಾಯಿ, ತಾಲೂಕಾಧ್ಯಕ್ಷ ಫಕೀರೇಶ ರಟ್ಟಿಹಳ್ಳಿ, ಮುಖಂಡರಾದ ತಿಮ್ಮರಡ್ಡಿ ಮರಡ್ಡಿ, ಜಾನು ಲಮಾಣಿ, ಡಾ. ಭೀಮಸಿಂಗ್ ರಾಠೋಡ, ದುಂಡೇಶ ಕೊಟಗಿ, ಗಂಗಾಧರ ಮೆಣಸಿನಕಾಯಿ, ನಾಗರಾಜ ಕುಲಕರ್ಣಿ, ಸೋಮಣ್ಣ ಡಾಣಗಲ್, ವೀರಣ್ಣ ಪವಾಡದ, ಶಿವನಗೌಡ್ರ ಕಂಠಿಗೌಡ್ರ, ಡಿ.ವೈ. ಹುನಗುಂದ ಇತರರಿದ್ದರು.

ಪಕ್ಷದ ಮುಖಂಡರು, ಹಿರಿಯರು ನನ್ನ ಮೇಲೆ ವಿಶ್ವಾಸವಿಟ್ಟು ನೀಡಿರುವ ಹುದ್ದೆಗೆ ನ್ಯಾಯ ನೀಡುವ ಮೂಲಕ ವ್ಯಾಪಾರಸ್ಥರ ಸಹಕಾರದಿಂದ ರೈತರ ಹಿತ ಕಾಯುವ ಕಾರ್ಯ ಮಾಡುತ್ತೇನೆ.| ನೀಲಪ್ಪ ಹತ್ತಿ ಎಪಿಎಂಸಿ ಅಧ್ಯಕ್ಷ ಲಕ್ಷ್ಮೇಶ್ವರ