ಬಿದರೂರು ವರ್ಧಮಾನ ದಿಗಂಬರ ಜೈನ ಬಸದಿಗೆ ಆಗಮಿಸಿದ ಕೊಲ್ಲಾಪುರದ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಅವರನ್ನು ಭಕ್ತರು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು. 
ಜಿಲ್ಲೆ

ಲಕ್ಷ್ಮೀಸೇನ ಸ್ವಾಮೀಜಿಗೆ ಪೂರ್ಣಕುಂಭ ಸ್ವಾಗತ

ಕಾರ್ಗಲ್: ಬಿದರೂರು ವರ್ಧಮಾನ ಸ್ವಾಮಿ ದಿಗಂಬರ ಜೈನ ಬಸದಿಯಲ್ಲಿ ಹತ್ತು ದಿನ ನಡೆಯುತ್ತಿರುವ ದಶಲಕ್ಷಣ ಮಹಾಪರ್ವ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ ಕೊಲ್ಲಾಪುರ ಜೈನ ಸಂಸ್ಥಾನದ ಶ್ರೀ ಅಭಿನವ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಅವರನ್ನು ಪೂರ್ಣಕುಂಭ ಕಳಸದೊಂದಿಗೆ ಬರಮಾಡಿಕೊಳ್ಳಲಾಯಿತು. ಶರಾವತಿ ಕಣಿವೆಗೆ ಮೊದಲ ಬಾರಿಗೆ ಪಾದಾರ್ಪಣೆ ಮಾಡಿದ ಶ್ರೀಗಳನ್ನು ಮಹಾವೀರ ವೃತ್ತದಿಂದ ಕಾರ್ಗಲ್ ಮುಖ್ಯ ಬೀದಿಯಲ್ಲಿ ಮೆರವಣಿಗೆಯಲ್ಲಿ ಕರೆತರಲಾಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಶ್ರಾವಕ ಮತ್ತು ಶ್ರಾವಕಿಯರು ಮುಂಜಾನೆಯಿಂದಲೇ ತಯಾರಿ ನಡೆಸಿದರು. ಪುರುಷರು ಬಿಳಿ ಪಂಚೆ ಅಂಗಿ, ಮಹಿಳೆಯರು ಒಂದೇ ಬಣ್ಣದ ಸೀರೆಯುಟ್ಟು ಸಮವಸ್ತ್ರದಲ್ಲಿ ಧ್ವಜ ಹಿಡಿದು ೋಷಣೆ ಹಾಕಿದರು. ಬಿದರೂರು ಗ್ರಾಮಕ್ಕೆ ಶ್ರೀಗಳು ಪುರಪ್ರವೇಶ ಮಾಡಿದರು. ಬಿದರೂರು ಜೈನ ಬಸದಿ ಆಡಳಿತ ಸಮಿತಿಯಿಂದ ಶ್ರೀಗಳಿಗೆ ಪಾದಪೂಜೆ ನೆರವೇರಿಸಲಾಯಿತು.