ಜಿಲ್ಲೆ

ಲಕ್ಷ್ಮೀಪುರ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಬಾಲಮುರಳಿಕೃಷ್ಣ

ಕಿಕ್ಕೇರಿ: ಹೋಬಳಿಯ ಲಕ್ಷ್ಮೀಪುರ ಗ್ರಾಮ ಪಂಚಾಯಿತಿಗೆ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷೆಯಾಗಿ ಕನಕಾ ರಾಜೇಶ್, ಉಪಾಧ್ಯಕ್ಷರಾಗಿ ಬಸವರಾಜು ಶುಕ್ರವಾರ ಆಯ್ಕೆಯಾದರು.


16 ಸದಸ್ಯರಿರುವ ಗ್ರಾ.ಪಂ.ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು, ಕನಕಾ ರಾಜೇಶ್, ಅನಿತಾ ಬಬ್ರುವಾಹನ ನಾಮಪತ್ರಸಲ್ಲಿಸಿದ್ದರು. ಕನಕಾ ರಾಜೇಶ್ 9 ಮತ ಪಡೆದು ವಿಜೇತರಾದರೆ, ಅನಿತಾ ಬಬ್ರುವಾಹನ 7ಮತ ಪಡೆದು ಪರಾಜಿತರಾದರು. ಉಪಾಧ್ಯಕ್ಷ ಸ್ಥಾನಕ್ಕೆ ಬಸವರಾಜು ಅವರನ್ನು ಬಿಟ್ಟು ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾದರು.


ಚುನಾವಣಾಧಿಕಾರಿಯಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅರುಣ್‌ಕುಮಾರ್ ಕಾರ್ಯ ನಿರ್ವಹಿಸಿದರು. ಅಭಿಮಾನಿಗಳು, ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಪಟ್ಟರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್, ಮುಖಂಡ ಚಂದ್ರು, ಗ್ರಾ.ಪಂ. ಸದಸ್ಯರು ಸೇರಿದಂತೆ ಇತರರಿದ್ದರು.