ಚಿತ್ರದುರ್ಗ: ಜಿಲ್ಲೆಯ ಪುಣ್ಯಕ್ಷೇತ್ರ ಹೊರಕೆರೆ ದೇವರಪುರದ ಲಕ್ಷ್ಮೀನರಸಿಂಹ ಸ್ವಾಮಿಯ 200 ವರ್ಷದ ರಥ ಹಳೆಯದಾಗಿದ್ದು, ಶಿಥಿಲಾವಸ್ತೆಯಲ್ಲಿದೆ. ಇದನ್ನು ಮನಗಂಡು ದುರಸ್ತಿಗಾಗಿ ತಜ್ಞರನ್ನು ಕರೆಸಿ, ಪರಿಶೀಲಿಸಲಾಗಿದೆ. ಆದರೆ, ದುರಸ್ತಿಯಿಂದ ಉಪಯೋಗವಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಹೀಗಾಗಿ ನೂತನ ರಥ ನಿರ್ಮಾಣಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ.
ಈ ಸಂಬಂಧ ಸ್ವಾಮಿಯ ಸನ್ನಿಧಾನದಲ್ಲಿ ಎಸ್‌ಎಲ್‌ಎನ್ ಟ್ರಸ್ಟ್, ಎಚ್.ಡಿ.ಪುರ ಗ್ರಾಪಂ ಅಧ್ಯಕ್ಷರು, ಮತಿಘಟ್ಟ, ನೆಲ್ಲಿಕಟ್ಟೆ ಕಸವನಹಳ್ಳಿ, ರಾಮೇನಹಳ್ಳಿ, ಪಂಪಾಪುರ ಗ್ರಾಮದ ಮುಖಂಡರು ಸಭೆ ನಡೆಸಿದ್ದು, ರಥ ನಿರ್ಮಿಸಲು ನಿರ್ಧರಿಸಿದರು.
ಮುಜರಾಯಿ ಇಲಾಖೆಯಿಂದ ಸಹಾಯಧನಕ್ಕಾಗಿ ಹೊಳಲ್ಕೆರೆ ತಹಸೀಲ್ದಾರರಿಗೆ ಮನವಿ ಸಲ್ಲಿಸಿ, ಪಡೆಯಲು ಅಭಿಪ್ರಾಯ ವ್ಯಕ್ತವಾದವು. ಹೆಚ್ಚಿನ ಹಣದ ಅಗತ್ಯವಿದ್ದಲ್ಲಿ ಭಕ್ತರ ಮೂಲಕ ಸಂಗ್ರಹಿಸಲು ಚರ್ಚಿಸಲಾಯಿತು.
ಇದರ ಜವಾಬ್ದಾರಿ ನಿರ್ವಹಿಸಲು ಮತಿಘಟ್ಟ ಗ್ರಾಮಸ್ಥರಿಗೆ ಹೆಚ್ಚಿನ ಅಧಿಕಾರ ನೀಡುವುದರ ಜೊತೆಯಲ್ಲಿ ನೆಲ್ಲಿಕಟ್ಟೆ ರಾಮೇನಹಳ್ಳಿ, ಕಸವನಹಳ್ಳಿ ಗ್ರಾಮಸ್ಥರ ಸಹಕಾರ ಪಡೆಯಲು ಒಮ್ಮತದ ಅಭಿಪ್ರಾಯ ಕೇಳಿಬಂದವು. ರಥ ನಿರ್ಮಾಣ ಸಂಬಂಧ ಇದೇ ವೇಳೆ ಸಮಿತಿ ರಚಿಸಲಾಯಿತು.
ಎಸ್‌ಎಲ್‌ಎನ್ ಟ್ರಸ್ಟ್ ಅಧ್ಯಕ್ಷ ಎಚ್.ಡಿ.ರಂಗಯ್ಯ, ಗ್ರಾಪಂ ಅಧ್ಯಕ್ಷ ಎಂ.ದಿವಾಕರ್, ಟ್ರಸ್ಟ್‌ನ ಪದಾಧಿಕಾರಿಗಳಾದ ಜಿ.ಎನ್.ಶೇಷಾದ್ರಿ, ದೇವರಾಜ, ಎಪಿಎಂಸಿ ಮಾಜಿ ಅಧ್ಯಕ್ಷ ನಾಗಲಿಂಗಪ್ಪ, ಮುಖಂಡರಾದ ಸಿ.ಜಯಣ್ಣ, ಎಂ.ಮಹೇಶ್ವರಪ್ಪ, ಸತೀಶ್, ವಿವೇಕ್, ಮಹೇಶ್ವರಪ್ಪ, ಚಂದ್ರಪ್ಪ, ರಾಮೇನಹಳ್ಳಿ ಪ್ರಕಾಶ್, ಹಾಲೇಶಪ್ಪ, ಜಿ.ಎಸ್.ಮಲ್ಲಿಕಾರ್ಜುನ, ಪಿ.ಎಲ್.ಪ್ರಕಾಶ್, ಸತ್ಯನಾರಾಯಣ, ಬಡಗಿ ನಟರಾಜ, ಎಚ್.ವಿ.ರಂಗನಾಥ, ರಮೇಶ, ಎಂ.ಆರ್.ಹೊರಕೆರೆ ರಂಗಯ್ಯ, ಬಿ.ಎನ್.ರವೀಂದ್ರ, ಗೌಡರ ಕೃಷ್ಣಮೂರ್ತಿ, ಎಲೆ ರಾಜಪ್ಪ, ಆನಂದ, ಹೊನ್ನೇನಹಳ್ಳಿ ನಾಗರಾಜ, ನಂದನ ಹೊಸೂರು ಮುರುಗೇಂದ್ರಪ್ಪ, ಗೊಲ್ಲರಹಟ್ಟಿ ಜಯಣ್ಣ, ರಂಗಸ್ವಾಮಿ ಇತರರಿದ್ದರು.