ಹುಲಸೂರು: ಮಹಾರಾಷ್ಟ್ರ ಗಡಿ ಭಾಗದ ಹಲಸಿತುಗಾಂವ ಗ್ರಾಮ ಹೊರವಲಯದ ಮಹಾಲಕ್ಷ್ಮೀ ಮಂದಿರ ಪರಿಸರದಲ್ಲಿ ಮೂರು ದಿನದಿಂದ ನಾಗರಹಾವು ಠಿಕಾಣಿ ಹೂಡಿದ್ದು, ಗ್ರಾಮಸ್ಥರಲ್ಲಿ ಕುತೂಹಲ ಜತೆಗೆ ಭಕ್ತಿಭಾವ ಮೂಡಿಸಿದೆ.
ಶನಿವಾರ ಬೆಳಗ್ಗೆ ದೇವತೆ ದರ್ಶನಕ್ಕೆ ಬಂದ ಜನರಿಗೆ ಮಂದಿರ ಎದುರು ನಾಗರಹಾವು ಹೆಡೆ ಎತ್ತಿ ಕುಳಿತಿರುವುದು ಕಂಡಿದೆ. ಸಾಮಾನ್ಯವಾಗಿ ಬಂದಿರಬಹುದು ಎಂದು ಭಾವಿಸಿದ ಜನರಿಗೆ ಅದರ ಬಳಿ ಹೋದರೂ ಭುಸುಗುಡದಿರುವುದನ್ನು ಕಂಡು ಅಚ್ಚರಿಯಾಗಿದೆ. ಇಲ್ಲದ ಪ್ರಯೋಗಕ್ಕೆ ಮುಂದಾಗದೆ ತಮ್ಮಷ್ಟಕ್ಕೆ ತಾವು ಮರಳಿದ್ದಾರೆ.
ಭಾನುವಾರ ಹೊಲದ ಮಾಲೀಕ ಮತ್ತು ಕೂಲಿ ಕಾಮರ್ಿಕರು ದೇಗುಲ ಬಲಭಾಗದ ಹೊಲದಲ್ಲಿ ಕೆಲಸ ಮಾಡುವಾಗ ಬೇವಿನ ಮರದ ಮೇಲೆ ಈ ಹಾವು ಕಂಡು ಆಶ್ಚರ್ಯಚಕಿತರಾಗಿ ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದ್ದಾರೆ. ಜನರು ಕಾಣಿಸಿದರೆ ಮರವೇರುವ ಹಾವು, ಯಾರೂ ಇಲ್ಲದಿದ್ದಾಗ ದೇಗುಲ ದ್ವಾರದ ಮುಂದೆ ಹೆಡೆ ಎತ್ತಿ ಕುಳಿತುಕೊಳ್ಳುತ್ತಿದೆ. ಈ ವಿಷಯ ಹರಡುತ್ತಿದ್ದಂತೆ ಜನ ತಂಡೋಪತಂಡವಾಗಿ ವೀಕ್ಷಿಸಲು ಬರುತ್ತಿದ್ದಾರೆ.
ಗ್ರಾಮಸ್ಥರ ಮನವಿ ಮೇರೆಗೆ ಬಂದ ಉರಗ ತಜ್ಞರು ಸತತ ಮೂರು ಗಂಟೆ ಪ್ರಯತ್ನ ಮಾಡಿದರೂ ಹಾವು ಗೋಣಿ ಚೀಲದೊಳಗೆ ಬರಲಿಲ್ಲ. ಇದರಿಂದ ಕೊಂಚ ವಿಚಲಿತರಾದಂತೆ ಕಂಡ ಅವರು, ಇದುವರೆಗೆ ಸಾವಿರಾರು ಹಾವುಗಳನ್ನು ಹಿಡಿದು ಅರಣ್ಯಕ್ಕೆ ಬಿಟ್ಟಿದ್ದೇವೆ. ಆದರೆ ಇದು ಎಷ್ಟೇ ಪ್ರಯತ್ನಿಸಿದರೂ ಚೀಲದಲ್ಲಿ ಬರುತ್ತಿಲ್ಲ. ಬಹುಶಃ ದೇವರ ಹಾವು ಇರಬಹುದು ಎಂದು ಹೇಳಿ ವಾಪಸಾಗಿದ್ದಾರೆ. ಇದನ್ನರಿತ ಸುತ್ತಲಿನ ಭಕ್ತರು ನಾಗದೇವತೆ ರೂಪದಲ್ಲಿ ಮಹಾಲಕ್ಷ್ಮೀ ಪ್ರತ್ಯಕ್ಷವಾಗಿದ್ದಾಳೆ ಎಂದು ಹಾಲು, ನೈವೇದ್ಯ ಅಪರ್ಿಸಿ ತೆಂಗು ಕಾಯಿ-ಕಪರ್ೂರ ಒಡೆಯುತ್ತಿದ್ದಾರೆ.
72 ಗಂಟೆಯಿಂದ ಹಾವು ರಾತ್ರಿ ಹೊತ್ತು ದೇವಸ್ಥಾನದ ಬಾಗಿಲು ಮುಂದೆ ಕುಳಿತರೆ, ಬೆಳಗ್ಗೆ ಮರವೇರಿ ಭಕ್ತಾದಿಗಳಿಗೆ ದರ್ಶನ ನೀಡುತ್ತಿದೆ. ಹಾವು ಕುಳಿತ ಮರಕ್ಕೆ ಜನರು ಡಬ್ಬಿ ಕಟ್ಟಿ ಅದರಲ್ಲಿ ಹಾಲು ಸುರಿಯುತ್ತಿದ್ದಾರೆ. ಕೆಳಗಡೆ ಮಹಿಳೆಯರು ಕಾಯಿ-ಕಪರ್ೂರ, ನೈವೇದ್ಯ ಅಪರ್ಿಸುವಾಗ ಹೆಡೆ ತೆಗೆಯುತ್ತದೆ. ಜನರು ದೂರ ಹೋಗುತ್ತಿದ್ದಂತೆ ಸಮಾಧಾನದಿಂದ ಕುಳಿತುಕೊಳ್ಳುತ್ತಿದೆ. ಅಪಾಯಕಾರಿ ಎನಿಸಿದರೂ ಯುವಕರು ಕೇವಲ ಮೂರಡಿ ದೂರ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಎಷ್ಟೇ ಸಮೀಪ ಹೋದರೂ ಉರಗ ಸಿಡಿಮಿಡಿಗೊಳ್ಳುತ್ತಿಲ್ಲ. ಹೀಗಾಗಿ ನಾಗದೇವತೆ ರೂಪದಲ್ಲಿ ಮಹಾಲಕ್ಷ್ಮೀಯೇ ದರ್ಶನ ನೀಡಲು ಪ್ರತ್ಯಕ್ಷವಾಗಿದ್ದಾಳೆ ಎಂದು ಪ್ರತ್ಯಕ್ಷದಶರ್ಿಗಳು ಹೇಳುತ್ತಿದ್ದಾರೆ. ಸೋಮವಾರ ದೇವಸ್ಥಾನ ಪದಾಧಿಕಾರಿಗಳು, ಮಹಿಳೆಯರು, ಮಕ್ಕಳು ಸೇರಿ ನೂರಾರು ಜನ ವಾದ್ಯ-ಮೇಳಗಳೊಂದಿಗೆ ದೇವಾಲಯಕ್ಕೆ ಪಾದಯಾತ್ರೆ ಮೂಲಕ ತೆರಳಿ ಹಾವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಭಕ್ತರ ದಂಡೇ ಹರಿದು ಬರುತ್ತಿರುವುದರಿಂದ ಮೇಹಕರ-ಹಲಸಿತುಗಾಂವ ರಸ್ತೆಯಲ್ಲಿ ಜಾತ್ರೆ ವಾತಾವರಣ ಸೃಷ್ಟಿಯಾಗಿದೆ.