ಚಿತ್ತಾಪುರ: ಮಹಿಳೆಯರು ವರಮಹಾಲಕ್ಷ್ಮೀ ಪೂಜೆ ಮಾಡುವುದರಿಂದ ಜೀವನದಲ್ಲಿ ಸಂಪತ್ತು, ಸಮೃದ್ಧಿ ದೊರೆಯಲಿದೆ ಎಂದು ಸೊನ್ನದ ಶ್ರೀ ಶಿವಾನಂದ ಶಿವಾಚಾರ್ಯರು ನುಡಿದರು.
ಪಟ್ಟಣದ ಕಂಬಳೇಶ್ವರ ಮಠದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಶ್ರೀ ಕಂಬಳೇಶ್ವರ ಸಂಸ್ಥಾನ ಮಠ, ನಾಗಾವಿ ನಾಡಿನ ವಲಯದ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷಿö್ಮÃ ಪೂಜೆ ಹಾಗೂ ಶ್ರೀ ಕಂಬಳೇಶ್ವರ ಮಠದ ಕುಮಾರೇಶ್ವರ ಧಾಮದ ಉದ್ಘಾಟನೆ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಪೂಜೆ, ಸಂಸ್ಕಾರಗಳಿAದ ಮನುಷ್ಯನಿಗೆ ಆಯುಷ್ಯ ವೃದ್ಧಿ ಆಗುತ್ತದೆ ಎಂದರು.
ಪ್ರತಿಯೊಬ್ಬರ ಮನೆಗಳಲ್ಲಿ ಶಾಂತಿ, ನೆಮ್ಮದಿ, ಸಮೃದ್ದಿಯ ಬದುಕು ಸಿಗಲಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಉತ್ತಮ ಸತ್ಸಂಗ, ಸಂಸ್ಕಾರ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಶ್ರೀ ಸೋಮಶೇಖರ ಶಿವಾಚಾರ್ಯರು, ಶ್ರೀ ಸಂಗಮನಾಥ ಶಿವಾಚಾರ್ಯರು, ಶ್ರೀ ಮಲ್ಲಯ್ಯ ಮುತ್ಯಾ, ಶ್ರೀ ರಾಜಶೇಖರ ಶಿವಾಚಾರ್ಯರು, ಶ್ರೀ ಮಲ್ಲಣ್ಣಪ್ಪ ಮುತ್ಯಾ, ಶ್ರೀ ಮಹಾಂತ ಶಿವಾಚಾರ್ಯರು, ಶ್ರೀ ಸಿದ್ಧಲಿಂಗ ಶಿವಾಚಾರ್ಯರು, ಶ್ರೀ ಚನ್ನಬಸವ ಶರಣರು ಮಾತನಾಡಿದರು.
ಕಂಬಳೇಶ್ವರ ಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರಿಗೆ ಸಾಬಣ್ಣ ಆನಮಿ, ಕರಬಸಯ್ಯ ಶಾಸ್ತಿçÃ, ಮಂಜುನಾಥ ಸ್ವಾಮಿ ಅವರಿಂದ ನಾಣ್ಯ, ಹಣ್ಣುಗಳಿಂದ ತುಲಾಭಾರ ನೆರವೇರಿಸಲಾಯಿತು.
ಶಿವಶರಣಯ್ಯಸ್ವಾಮಿ ಪುರದಯ್ಯನಮಠ, ಮಂಜುನಾಥ ಶಾಸ್ತಿçÃ, ಕರಬಸಯ್ಯ ಶಾಸ್ತಿçÃ, ಕ್ಷೇಮಲಿಂಗಯ್ಯ ಮಠಪತಿ ಮಂತ್ರ ಪಠಿಸಿದರು. ಶ್ರೀ ಕೇದಾರಲಿಂಗ ಶಿವಾಚಾರ್ಯರು, ಶ್ರೀ ಸಂಗಮೇಶ್ವರ ಶಿವಾಚಾರ್ಯರು, ಶ್ರೀ ರಾಜ ಶಿವಯೋಗಿ, ಧರ್ಮಸ್ಥಳ ಸಂಸ್ಥೆ ಯೋಜನಾಧಿಕಾರಿ ಗುರುರಾಜ ಬಿ, ವೀರಶೈವ ಸಮಾಜ ತಾಲೂಕಾಧ್ಯಕ್ಷ ನಾಗರಾಜ ಭಂಕಲಗಿ, ಪ್ರಮುಖರಾದ ಸೋಮಶೇಖರ ಪಾಟೀಲ್ ಬೆಳಗುಂಪಾ, ಚಂದ್ರಶೇಖರ ಕಾಶಿ, ಬಸವರಾಜ ಹೂಗಾರ, ಓಂಕಾರೇಶ್ವರ ರೇಷ್ಮಿ ಇತರರಿದ್ದರು. ಮಂಜುನಾಥ ಶಾಸ್ತಿçà ನಿರೂಪಣೆ ಮಾಡಿದರು.