ಚಿನ್ನದ ಪದಕ ಪಡೆದ ಲಕ್ಷಿ÷್ಮÃ ಕಮತಗಿ ಹಾಗೂ ಸುಶ್ಮೀತಾ ಬಡಿಗೇರ. 
ಜಿಲ್ಲೆ

ಲಕ್ಷ್ಮೀ ಕಮತಗಿ, ಸುಶ್ಮೀತಾ ಬಡಿಗೇರ ಚಿನ್ನದ ಪದಕ

ಬಾಗಲಕೋಟೆ: ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಅಂತರ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ ಜೊತೆಗೆ ಚಿನ್ನದ ಪದಕ ಪಡೆದುಕೊಂಡು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ವಿಜಯಪುರದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಂತರ ಮಹಾವಿದ್ಯಾಲಯಗಳ ೨೦೨೪-೨೫ ನೇ ಸಾಲೀನ ೧೮ನೇ ಅಥ್ಲೇಟಿಕ್ಸ್ ಕ್ರೀಡಾಕೂಟ ನ.೨೦ ರಿಂದ ೨೨ ವರೆಗೆ ಹಮ್ಮಿಕೊಳ್ಳಲಾಗಿತ್ತು. ಈ ಕ್ರೀಡಾಕೂಟದಲ್ಲಿ ವಿದ್ಯಾರ್ಥಿನಿ ಲಕ್ಷ್ಮೀ ಕಮತಗಿ ೨೦೦ ಹಾಗೂ ೪೦೦ ಮೀಟರ್ ಓಟದಲ್ಲಿ ಪ್ರಥಮ ಸ್ಥಾನಗಳಿಸಿ ಚಿನ್ನದ ಪದಕ ಮುಡಿಗೇರಿಸಿಕೊಂಡು ದಾಖಲೆ ಮಾಡಿದ್ದಾಳೆ. ಜೊತೆಗೆ ೨೦ ಕಿ.ಮೀ ನಡೆಗೆಯಲ್ಲಿ ವಿದ್ಯಾರ್ಥಿನಿ ಸುಶ್ಮೀತಾ ಬಡಿಗೇರ ದ್ವಿತೀಯ ಸ್ಥಾನಗಳಿಸಿ ನೂತನ ದಾಖಲೆ ನಿರ್ಮಿಸುವ ಮೂಲಕ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ, ಶಾಸಕ ಎಚ್.ವೈ.ಮೇಟಿ, ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಎನ್.ಪಟ್ಟಣಶೆಟ್ಟಿ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸುನೀಲ ನಡಕಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ.