ಮುಂಡರಗಿ ತಾಲೂಕಿನ ಶಿಂಗಟಾಲೂರು ತುಂಗಭದ್ರಾ ನದಿ ಭಾಗದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳನ್ನು ತಹಸೀಲ್ದಾರ್ ಶ್ರುತಿ ಮಳ್ಳಪ್ಪಗೌಡರ ಹಾಗೂ ಸಿಪಿಐ ವೀರಣ್ಣ ಹಳ್ಳಿ ನೇತೃತ್ವದ ತಂಡ ವಶಕ್ಕೆ ಪಡೆಯಿತು. ಬಸವರಾಜ ಪಿ., ಲಕ್ಯಾನಾಯ್ಕ ವಿ., ಡಿ.ಎ.ಕರಮನಿ ಇತರರಿದ್ದರು 
ಜಿಲ್ಲೆ

ಲಕ್ಷಾಂತರ ರೂ. ಮೌಲ್ಯದ ಅಕ್ರಮ ಮರಳು ವಶ

ಮುಂಡರಗಿ: ತಾಲೂಕಿನ ಶಿಂಗಟಾಲೂರ ಗ್ರಾಮದ ತುಂಗಭದ್ರಾ ನದಿ ಭಾಗದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳು ಅಡ್ಡೆಯ ಮೇಲೆ ತಹಸೀಲ್ದಾರ್ ಶ್ರುತಿ ಮಳ್ಳಪ್ಪಗೌಡರ ಹಾಗೂ ಸಿಪಿಐ ವೀರಣ್ಣ ಹಳ್ಳಿ ನೇತೃತ್ವದ ತಂಡ ಮಂಗಳವಾರ ಮಧ್ಯರಾತ್ರಿ ದಾಳಿ ನಡೆಸಿ ಮರಳನ್ನು ವಶಪಡಿಸಿಕೊಂಡಿದ್ದಾರೆ.
ಶಿಂಗಟಾಲೂರ ತುಂಗಭದ್ರಾ ನದಿ ದಡದಲ್ಲಿ ಅಂದಾಜು 1.3 ಲಕ್ಷ ರೂ.ಮೌಲ್ಯದ 12 ಟಿಪ್ಪರ್​ನಷ್ಟು ಮರಳನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ಅಕ್ರಮ ಮರಗಳನ್ನು ತಹಸೀಲ್ದಾರ್ ಅವರು ಗದಗ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಸ್ತಾಂತರಿಸಿದರು. ಕಂದಾಯ ಇಲಾಖೆ ಸಿಬ್ಬಂದಿ ಬಸವರಾಜ ಪಿ., ಲಕ್ಯಾ ನಾಯ್ಕ ವಿ, ಡಿ.ಎ. ಕರಮನಿ, ಪೊಲೀಸ್ ಸಿಬ್ಬಂದಿ ಅಪ್ಪಣ್ಣ ರಾಠೋಡ, ಶರೀಫ್ ಮುಲ್ಲಾ ಇತರರು ಇದ್ದರು.