ಜಿಲ್ಲೆ

ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಪರೀಕ್ಷಾ ಪೇ ಚರ್ಚಾ ವೀಕ್ಷಣೆ

ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ನಡೆಸಿಕೊಟ್ಟ ಪರೀಕ್ಷಾ ಪೇ ಚರ್ಚಾಕಾರ್ಯಕ್ರಮ, ಶೈಕ್ಷಣಿಕ ಭಾಗೀದಾರರಲ್ಲಿ ಸ್ಫೂರ್ತಿ ನೀಡಿದೆ ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.
ನಗರದ ಡಯಟ್‌ನಲ್ಲಿ ಸೋಮವಾರ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದ ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳು ಪ ರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಿ, ಆತ್ಮವಿಶ್ವಾಸದಿಂದ ಬರೆಯಲು ವಿದ್ಯಾರ್ಥಿಗಳಿಗೆ ಪ್ರಧಾನಿ ಅವರೊಂದಿಗೆ ನಡೆದ ಸಂವಾದ ವಿದ್ಯಾ ರ್ಥಿಗಳಿಗೆ ಪ್ರೇರಣೆ ನೀಡಿದೆ ಎಂದರು.
ನೋಡಲ್ ಅಧಿಕಾರಿ ಎಸ್.ಸಿ.ಪ್ರಸಾದ್ ಮಾತನಾಡಿ,ಈ ಕಾರ್ಯಕ್ರಮ ಜಿಲ್ಲೆಯ ಸರ್ಕಾರಿ,ಅನುದಾನಿತ ಮತ್ತು ಅನುದಾನರಹಿತ 6 ರಿಂದ 12ನೇತರಗತಿಯ 1700 ಶಾಲೆಗಳ 116600 ವಿದ್ಯಾರ್ಥಿ ಹಾಗೂ ಶಿಕ್ಷಕರು ಈ ಕಾರ‌್ಯಕ್ರಮ ವೀಕ್ಷಿಸಿದ್ದಾರೆ ಎಂದರು.
ಸಹಾಯಕ ನೋಡಲ್ ಅಧಿಕಾರಿ ಎಸ್.ಬಸವರಾಜು,ಹಿರಿಯ ಉಪನ್ಯಾಸಕರಾದ ಎಸ್. ಜ್ಞಾನೇಶ್ವರ, ಎಚ್.ಗಿರಿಜಾ, ಪೂರ್ಣಿಮಾ, ಉಪನ್ಯಾಸಕರಾದ ಕೆ.ಜಿ.ಪ್ರಶಾಂತ್,ಸಿ.ಎಸ್.ಲೀಲಾವತಿ, ವಿ.ಕನಕಮ್ಮ, ಎನ್.ಮಂಜುನಾಥ್, ತಾಂತ್ರಿಕ ಸಹಾಯಕ ಆರ್.ಲಿಂಗರಾಜು ಮತ್ತಿತರರು ಇದ್ದರು.