ಜಿಲ್ಲೆ

ಲಕ್ಷಕ್ಕೂ ಅಧಿಕ ಕುಟುಂಬಗಳಿಲ್ಲ ವಸತಿಗಳು

ಬಳ್ಳಾರಿ : ರಾಜ್ಯದಲ್ಲಿ ಕಳೆದ ಐದು ವರ್ಷದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ವಸತಿ ರಹಿತ ಯೋಜನೆಯಡಿ ಜಾರಿಯಾದ 1.28 ಲಕ್ಷಕ್ಕೂ ಅಧಿಕ ವಸತಿಗಳಿಗೆ ವಿವಿಧ ಹಂತದ ಲಾಗಿನ್‌ನಲ್ಲಿ ಅನುಮೋದನೆಗೆ ಬಾಕಿಯಿವೆ. ಲಾಗಿನ್ ನೀಡಿ ವಸತಿ ನಿರ್ಮಿಸಿಬೇಕಾದ ಅಧಿಕಾರಿಗಳು ನಿರಾಸಕ್ತಿ ವಹಿಸುತ್ತಿದ್ದಾರೆ ಎಂದು ಸಾರ್ವಜನಿಕರು ಸಂಬಂಧಪಟ್ಟ ಇಲಾಖೆ ವಿರುದ್ದ ಹಿಡಿ ಶಾಪ ಹಾಕುತ್ತಿದ್ದಾರೆ.
ಈಗಾಗಲೇ ರಾಜ್ಯಾದ್ಯಂತ ಮುಂಗಾರು ಎಲ್ಲ ಜಿಲ್ಲೆಗಳಲ್ಲಿ ಎಡಬಿಡದೆ ಸುರಿಯುತ್ತಿದೆ. ಸರ್ಕಾರದಿಂದ ಜಾರಿಯಾದ ಅನುದಾನದ ಮೂಲಕ ಮನೆ ನಿರ್ಮಿಸುವ ಉದ್ದೇಶದಿಂದ ಗುಡಿಸಲು ಹಾಗೂ ಶೆಡ್‌ಗಳಲ್ಲಿ ಆಶ್ರಯ ಪಡೆದಿದ್ದಾರೆ. ಅಲ್ಲದೇ, ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಪಂ ಸದಸ್ಯರ ಮೂಲಕ ವಸತಿ ಬಿಡುಗಡೆ ಮಾಡಲಾಗುತ್ತಿದೆ. ಕೆಲ ಸದಸ್ಯರು ಒಂದು ಮನೆಗೆ ಇಂತಿಷ್ಟು ಹಣ ಪಡೆಯುತ್ತಿದ್ದಾರೆ ಎಂಬ ಆರೋಪ ಹಾಗೂ ಅವರ ಸಂಬಂಧಿಕರಿಗೆ ವಸತಿ ಕಲ್ಪಿಸಿಸುತ್ತಿದ್ದಾರೆ ಎಂಬ ಮಾತು ಕೂಡ ಬಲವಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬಸವ ವಸತಿ, ದೇವರಾಜು ಅರಸು(ಗ್ರಾಮೀಣ)(ನಗರ), ಡಾ. ಅಂಬೇಡ್ಕರ್ ನಿವಾಸ್( ಗ್ರಾಮೀಣ) (ನಗರ), ಪ್ರಧಾನ ಮಂತ್ರಿ ಅವಾಸ್ ಯೋಜನೆ( ಗ್ರಾಮೀಣ), ವಾಜಪೇಯಿ ವಸತಿ (ನಗರ) ಯೋಜನೆಯಡಿ 2019 ರಿಂದ 2023 ರವರ ಸಾಲಿನ ವರೆಗೆ 6,14,127 ಗುರಿ ನೀಡಲಾಗಿದೆ. ಇದರಲ್ಲಿ 4,85,670 ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಆದರೆ, ಕೇವಲ 1,59,953 ವಸತಿಗಳು ಮಾತ್ರ ಪೂರ್ಣಗೊಂಡಿದ್ದು, 1,33,477 ವಸತಿಗಳು ಪ್ರಕ್ರಿಯೆ ಹಂತದಲ್ಲಿವೆ. ಇನ್ನೂ 1,70,374 ವಸತಿಗಳ ಕಾಮಗಾರಿಯೇ ಆರಂಭವಾಗಿಲ್ಲ. ಪೂರ್ಣ ಪ್ರಮಾಣದ ದಾಖಲಾತಿಗಳ ನೀಡಿಲ್ಲ ಎಂಬ ಅಂಶದಿಂದ 21,866 ಅರ್ಜಿಗಳನ್ನು ರದ್ದುಗೊಳಿಸಲಾಗಿದೆ.
ಪ್ರತಿ ಜಿಲ್ಲಾವಾರು ಇಲಾಖೆಯಿಂದ ಪ್ರಗತಿ ಹಂತದ ಹಾಗೂ ಆರಂಭವಾಗದ ವಸತಿಗಳ ಸೇರಿದ ಮಾಹಿತಿಯಲ್ಲಿದೆ. ಬಾಗಲಕೋಟೆ 8976, ಬಳ್ಳಾರಿ 4540, ಬೆಳಗಾವಿ 22538, ಬೆಂಗಳೂರು ಗ್ರಾಮೀಣ 4121, ಬೆಂಗಳೂರು ನಗರ 1519, ಬೀದರ್ 9967, ಚಾಮರಾಜನಗರ 7252, ಚಿಕ್ಕಬಳ್ಳಾಪುರ 7033, ಚಿಕ್ಕಮಂಗಳೂರು 5716, ಚಿತ್ರದುರ್ಗ 18015, ದಕ್ಷಿಣ ಕನ್ನಡ 3763, ದಾವಣಗೆರೆ 11457, ಧಾರವಾಡ 5958, ಗದಗ 8673, ಹಾಸನ 9833, ಹಾವೇರಿ 9515, ಕಲ್ಬುರ್ಗಿ 14253, ಕೊಡಗು 2101, ಕೋಲಾರ 8236, ಕೊಪ್ಪಳ 12335, ಮಂಡ್ಯ 8406, ಮೈಸೂರು 14158, ರಾಯಚೂರು 11479, ರಾಮನಗರ 5643, ಶಿವಮೊಗ್ಗ 11479, ತುಮಕೂರು 20235, ಉಡುಪಿ 4765, ಉತ್ತರ ಕನ್ನಡ 18232, ವಿಜಯನಗರ 9985, ವಿಜಯಪುರ 17069, ಯಾದಗಿರಿ 7807 ಸೇರಿದಂತೆ ಒಟ್ಟಾರೆ 3,03,851 ವಸತಿಗಳ ಕಾಮಗಾರಿಗಳ ಪೂರ್ಣಗೊಳ್ಳಬೇಕಿದೆ.
ಬಸವಯೋಜನೆಯಡಿ 1.20 ಲಕ್ಷ ರೂ., ದೇವರಾಜು ಅರಸು ಯೋಜನೆಯಡಿ ಎಸ್‌ಸಿ, ಎಸ್‌ಟಿಯವರಿಗೆ 2 ಲಕ್ಷ ರೂ. ಹಾಗೂ ಸಾಮಾನ್ಯರಿಗೆ 1.20 ಲಕ್ಷ ರೂ., ಡಾ. ಬಿ. ಆರ್. ಅಂಬೇಡ್ಕರ್ ನಿವಾಸ್ ಯೋಜನೆಯಡಿ 2 ಲಕ್ಷ ರೂ. ಹಾಗೂ ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ಎಸ್‌ಸಿ, ಎಸ್‌ಟಿ ವರ್ಗದವರಿಗೆ 1.75 ಲಕ್ಷ ರೂ. ಮತ್ತು ಸಾಮಾನ್ಯರಿಗೆ 1.50 ಲಕ್ಷ ರೂ. ಸರ್ಕಾರದಿಂದ ವಸತಿ ನಿರ್ಮಿಸಿಕೊಳ್ಳಲು ಅನುದಾನ ದೊರೆಯಲಿದೆ. ಅರ್ಹ ಫಲಾನುಭವಿಗಳಿಗೆ ಹಂತ ಹಂತವಾಗಿ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಲಾಗುವುದು.

ಕೋಟ್… ನಗರದಲ್ಲಿ ಹಂತ ಹಂತವಾಗಿ ವಸತಿ ನಿರ್ಮಿಸಿ ದಾಖಲೆ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ನಗರಾಭಿವೃದ್ಧಿ ಕೋಶ ಇಲಾಖೆಯಿಂದ ಹಣ ಬಿಡುಗಡೆ ಮಾಡಲಾಗಿದೆ. ಆದರೆ, ಕೆಲವರು ಸೂಕ್ತವಾದ ದಾಖಲೆಗಳು ಒದಗಿಸದೆ ಇರುವುದರಿಂದ ಹಣ ಬಿಡುಗಡೆಯಾಗಿಲ್ಲ. ನಗರದ ಬಹುತೇಕ ವಸತಿಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ಪ್ರಸ್ತಕ ಸಾಲಿನಲ್ಲಿ ಸರ್ಕಾರದಿಂದ ವಸತಿ ನಿರ್ಮಾಣದ ಗುರಿ ನೀಡಿಲ್ಲ.

  • ರಾಘವೇಂದ್ರಗುರು, ಯೋಜನಾ ಅಧಿಕಾರಿ, ನಗರಾಭಿವೃದ್ಧಿ ಕೋಶ, ಬಳ್ಳಾರಿ.