ಮೈಸೂರು: ನಗರದ ಕಲ್ಯಾಣಗಿರಿ ಶ್ರೀಕಲ್ಯಾಣ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಡಿ.15ರಂದು ಆಯೋಜಿಸಿರುವ ಲಕ್ಷ ದೀಪೋತ್ಸವದ ಭಿತ್ತಿಪತ್ರವನ್ನು ಬುಧವಾರ ಬಿಡುಗಡೆ ಮಾಡಲಾಯಿತು.
ಡಾ.ರಾಜಕುಮಾರ್ ರಸ್ತೆಯಲ್ಲಿರುವ ಶ್ರೀ ಕಲ್ಯಾಣ ಲಕ್ಷ್ಮಿವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ವಿಷ್ಣು ದೀಪೋತ್ಸವದ ಪ್ರಯುಕ್ತ 15ರಂದು ಲಕ್ಷ ದೀಪೋತ್ಸವ ಆಯೋಜಿಸಲಾಗಿದೆ ಇದಕ್ಕಾಗಿ ಸಿದ್ಧತೆ ಪೂರ್ಣಗೊಂಡಿದೆ ಎಂದು ದೇವಸ್ಥಾನದ ಸಂಸ್ಥಾಪಕ ಎಚ್.ಜಿ.ಗಿರಿಧರ್ ಹೇಳಿದರು.
ಅಂದು ಬೆಳಗ್ಗೆ 9ಕ್ಕೆ ದೇವರಿಗೆ ವಿಶೇಷ ಅಭಿಷೇಕ, ಅಲಂಕಾರ, ಮಧ್ಯಾಹ್ನ 12ಕ್ಕೆ ಸಾಮ್ರಾಜ್ಯ ಮಹಾಲಕ್ಷ್ಮೀ ಯಾಗ, ಪೂರ್ಣಾಹುತಿ ನಡೆಯಲಿದೆ. ಬಳಿಕ ಒಂದು ಗಂಟೆಗೆ ಅನ್ನದಾನ, ಸಂಜೆ 5ಕ್ಕೆ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಸಂಜೆ 6ಕ್ಕೆ ಲಕ್ಷ ದೀಪೋತ್ಸವ ಸಂಪನ್ನಗೊಳ್ಳಲಿದೆ. ಆದ್ದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಅವರು ಕೋರಿದರು.
ಬಿಜೆಪಿ ನರಸಿಂಹರಾಜ ಕ್ಷೇತ್ರದ ಅಧ್ಯಕ್ಷ ಸ್ಮಾರ್ಟ್ ಮಂಜು, ಪ್ರಧಾನ ಕಾರ್ಯದರ್ಶಿ ಪದ್ಮನಾಥ್, ದೇವಸ್ಥಾನದ ಅರ್ಚಕರಾದ ದರ್ಶನ್ ಕುಮಾರ್, ನಿಕಿತ್, ಪ್ರಕಾಶ್ ಇತರರು ಇದ್ದರು.