ಜಿಲ್ಲೆ

ಲಂಚ ಪಡೆದರೆ ಕಠಿಣ ಕ್ರಮ ; ಶಾಸಕ ಕೆ.ಎಸ್ ಲಿಂಗೇಶ್

ಬೇಲೂರು : ತಾಲೂಕಿನಾಧ್ಯಂತ ಕಳೆದ ಮೂರು ತಿಂಗಳು ಸುರಿದ ಮಳೆಯಿಂದಾಗಿ ತಾಲೂಕಿನಲ್ಲಿ ನೆರೆ ಹಾವಳಿಯಿಂದ ಹಾದ ಹಾನಿಗೆ ಸಂಬಂಧಿಸಿದಂತೆ ಅರ್ಜಿ ಪಡೆಯುವ ಸಂದರ್ಭ ಲಂಚ ಪಡೆದಿರುವುದು ಗೊತ್ತಾದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಾಗುವುದು ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.

ಬೇಲೂರು ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನಾಧ್ಯಂತ ಈ ಬಾರಿ ಬಂದ ಮಳೆಯಿಂದಾಗಿ ಕಳೆದ ಹದಿನೈದು-ಇಪ್ಪತ್ತು ವರ್ಷಗಳಿಂದ ತಿಂಬದ ಕೆರೆ ಕಟ್ಟೆಗಳು ತುಂಬಿರುವುದು ಸಂತೋಷದ ಸಂಗತಿಯಾಗಿದೆ. ಆದರೆ ಅತಿವೃಷ್ಠಿಯಿಂದ ಸಾಕಷ್ಟು ನಷ್ಟವಾಗಿದೆ. ಇದರಿಂದಾಗಿ ತಾಲೂಕಿನ ಜನ ಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅತೀವೃಷ್ಠಿಯಿಂದ ಹಾಗಿರುವ ನಷ್ಟಕ್ಕೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ತಾಲೂಕು ಆಡಳಿತಕ್ಕೆ ಸೂಚಿಸಲಾಗಿದೆ ಮತ್ತು ಹೆಚ್ಚಿನ ಅನುಧಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದು, ನಷ್ಟ ಹೊಂದಿರುವವರು ಸಂಬಂಧಿಸಿದ ಇಲಾಖೆಗಳಲ್ಲಿ ಅರ್ಜಿ ಸಲ್ಲಿಸಬೇಕು. ಹಾಗೂ ಸರ್ಕಾರದಿಂದ ಪರಿಹಾರ ಬಿಡುಗಡೆ ಮಾಡುವಂತೆ ಒತ್ತಡ ಹಾಕಲಾಗುವುದು ಎಂದರು.

ತಹಸೀಲ್ದಾರ್ ರಮೇಶ್ ಮಾತನಾಡಿ, ತಾಲೂಕಿನಲ್ಲಿ ಮಳೆಯಂದ 89 ಮನೆಗಳಿಗೆ ಹಾನಿಯಾಗಿದೆ. ಇದರಲ್ಲಿ ಎ.ಬಿ.ಸಿ ಎಂಬ ಕೆಟಗೇರಿಯಲ್ಲಿ ಈಗಾಗಲೇ 69.75 ಲಕ್ಷ ರೂ, ನೀಡಲಾಗಿದೆ. ಹಾಗೂ ಇತರೆ ಬೆಳೆ ಹಾನಿ ಸಂಬಂಧಿಸಿದಂತೆ ಆಯಾ ಇಲಾಖೆಯಲ್ಲೆ ಅರ್ಜಿ ಸಲ್ಲಿಸಿ ರೈತರು ಪರಿಹಾರ ಪಡೆಯಬಹುದಾಗಿದೆ ಎಂದರು.

ಈ ಬಾರಿಯ ಮಳೆ ಹಾನಿಯಿಂದ ಲೋಕೋಪಯೋಗಿ ಇಲಾಖೆಯಲ್ಲಿ 21 ಕೋಟಿ, 86 ಲಕ್ಷ ರೂ, ನಷ್ಟವಾದರೆ, ಪಂಚಾಯತ್ ರಾಜ್ ಇಲಾಖೆಯಲ್ಲಿ 13 ಕೋಟಿ 95 ಲಕ್ಷ ನಷ್ಟವಾಗಿದೆ. ಸೆಸ್ಕ್‌ನಲ್ಲಿ 57 ಲಕ್ಷ, ಮನೆಗಳು ಬಿದ್ದಿರುವುದು ಮತ್ತು ಹಾನಿಯಿಂದಾಗಿ ಒಟ್ಟು 157 ಕೋಟಿಯಷ್ಟು ನಷ್ಟವಾಗಿದೆ.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಶಿಧರ್ ಮಾತನಾಡಿ, ತಾಲೂಕಿನಲ್ಲಿ ವಾಡಿಕೆಗಿಂದ ಶೇಕಡಾ 86% ರಷ್ಟು ಅಧಿಕ ಮಳೆಯಾಗಿದೆ. ಮಳೆಯಿಂದ ರೈತರಿಗಾದ ಬೆಳೆ ನಷ್ಟಕ್ಕೆ ಪರಿಹಾರ ನೀಡಲು ಕಂದಾಯ ಇಲಾಖೆಯೊಂದಿಗೆ ಜಂಠಿ ಸಮೀಕ್ಷೆ ಮಾಡಲಾಗಿದೆ. ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಇನ್ನೂ ಎಂಟು ದಿನಗಳ ಸಮಯ ಇದ್ದು, ರೈತರು ಸಕಾಲಕ್ಕೆ ಅರ್ಜಿ ಸಲ್ಲಿಸಿ ಸರ್ಕಾರದಿಂದ ಸಹಾಯ ಪಡೆಯ ಬಹುದಾಗಿದೆ ಎಂದರು.

ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಚಂದನ್ ಮಾತನಾಡಿ, ತಾಲೂಕಿನಲ್ಲಿ ಅತೀವೃಷ್ಠಿಯಿಂದ 67 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಆಲೂಗಡ್ಡೆ, 194 ಹೆಕ್ಟೇರ್‌ನಲ್ಲಿ ಬೆಳೆದಿದ್ದ ತರಕಾರಿ ಬೆಳೆ, 3713 ಹೆಕ್ಟೇರ್ ಕಾಫಿ, ಮೆಣಸು ಸಂಪೂರ್ಣವಾಗಿ ನಾಶವಾಗಿದ್ದು, ಒಟ್ಟಾರೆಯಾಗಿ 20 ಕೋಟಿ ರೂ, ನಷ್ಟು ನಷ್ಟ ಸಂಭವಿಸಿದ್ದು, ರೈತರು ಪರಿಹಾರಕ್ಕೆ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಎಇ ಸಾಗರ್ ಮಾತನಾಡಿ, ಮೂರು ತಿಂಗಳು ಸುರಿದ ಬಾರಿ ಮಳೆಯಿಂದಾಗಿ ತಾಲೂಕಿನಾಧ್ಯಂತ 48 ರಸ್ತೆ, 14 ಸೇತುವೆ, 50 ಕೆರೆಗಳು, ಅನೇಕ ಶಾಲಾ ಕಟ್ಟಡಗಳು ಶಿಥಿಲಾವಸ್ತೆ ತಲುಪಿದ್ದು, ಇದರ ದುರಸ್ಥಿಗಾಗಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಇನ್ನೂ ಯಾವುದೇ ಅನುದಾನ ಬಂದಿಲ್ಲದ ಕಾರಣ ಕೆಲಸ ಮಾಡಿಸಲು ಸಾಧ್ಯವಾಗಿಲ್ಲ ಎಂದರು. ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳಿದ್ದರು.