ಜಿಲ್ಲೆ

ಲಂಕೇಶ್ ವಿಶ್ವವಿದ್ಯಾಲಯವಿದ್ಯಂತೆ

ಚಿತ್ರದುರ್ಗ: ಪತ್ರಕರ್ತ ಪಿ.ಲಂಕೇಶ್ ಅವರು ಒಂದು ವಿಶ್ವವಿದ್ಯಾಲಯ ಇದ್ದಂತಿದ್ದರು. ಅವರು ನಾಡಿನ ಅನೇಕ ಲೇಖಕರನ್ನು ಗುರುತಿಸಿ ಪ್ರೋತ್ಸಾಹಿಸಿದರು ಎಂದು ನಿವೃತ್ತ ಪ್ರಾಚಾರ್ಯ ಡಾ.ಸಂಗೇನಹಳ್ಳಿ ಅಶೋಕಕುಮಾರ್ ತಿಳಿಸಿದರು.
ಪಿ.ಲಂಕೇಶ್ ಜನ್ಮದಿನದ ಅಂಗವಾಗಿ ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಮತ್ತೆ, ಮತ್ತೆ ಲಂಕೇಶ್ ಮೇಷ್ಟ್ರು’ ಕಾರ‌್ಯಕ್ರಮದಲ್ಲಿ ಮಾತನಾಡಿ, ಲಂಕೇಶ್ ಅವರು ಪತ್ರಕರ್ತ ಅಷ್ಟೇ ಅಲ್ಲ. ಅವರೊಬ್ಬ ಲೇಖಕ, ಕವಿ, ಮಾನವೀಯತೆಯ ಕಣಜದಂತಿದ್ದರು ಎಂದು ಬಣ್ಣಿಸಿದರು.
ಚಿಂತಕ ಪ್ರೊ.ಜೆ.ಯಾದವರೆಡ್ಡಿ ಮಾತನಾಡಿ, ಲಂಕೇಶ್ ಅವರಲ್ಲಿ ಅದ್ಭುತ ಭಾಷಾ ಸಾಮರ್ಥ್ಯವಿತ್ತು. ಪತ್ರಕರ್ತರು ಹೆಚ್ಚು ಅಧ್ಯಯನ ಮಾಡಬೇಕು ಎಂದು ಹೇಳುತ್ತಿದ್ದರು. ಎಲ್ಲ ಸಿದ್ಧಾಂತಗಳನ್ನೂ ಮೀರಿದ ಅಪ್ಪಟ ಮಾನವ ಪ್ರೀತಿ ಅವರಿಗಿತ್ತು ಎಂದು ಹೇಳಿದರು.
ಲೇಖಕ ಜಡೇಕುಂಟೆ ಮಂಜುನಾಥ್ ಮಾತನಾಡಿ, ನಗರದಲ್ಲಿ ಈ ಹಿಂದೆ ಡಾ.ಬಿ.ಎ.ಶರಭೇಂದ್ರಯ್ಯ ಅವರ ಒತ್ತಾಸೆಯಿಂದ ಸ್ಥಾಪಿಸಿದ್ದ ಲಂಕೇಶ್ ವಿಚಾರ ವೇದಿಕೆ ನಿಷ್ಕ್ರಿಯವಾದದ್ದು ನೋವಿನ ಸಂಗತಿ ಎಂದರು.
ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿ, ಲಂಕೇಶ್ ಅವರ ಪ್ರಗತಿ ರಂಗದ ಪ್ರಣಾಳಿಕೆಯನ್ನು ರಾಜಕೀಯ ಪಕ್ಷಗಳು ಅಳವಡಿಸಿಕೊಂಡಿದ್ದರೆ ಕರ್ನಾಟದ ಚಿತ್ರಣವೇ ಬದಲಾಗುತ್ತಿತ್ತು. ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳಿಗೆ ಲಂಕೇಶ್ ಮಹತ್ವ ಕೊಡಲಿಲ್ಲವೆಂಬ ಕೊರಗು ಈಗಲೂ ಕಾಡಿದೆ ಎಂದರು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಗೌಡಗೆರೆ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತರಾದ ಟಿ.ತಿಪ್ಪೇಸ್ವಾಮಿ ಸಂಪಿಗೆ, ಎಂ.ಎನ್.ಅಹೋಬಲಪತಿ ಮಾತನಾಡಿದರು. ಗೋವಿಂದಪ್ಪ ನಿರೂಪಿಸಿದರು.

*ಕೋಟ್
ಲಂಕೇಶ್ ನಾಡಿನಲ್ಲಿ ಅನೇಕರನ್ನು ಪ್ರಭಾವಿಸಿದ್ದಾರೆ. ಅವರೊಬ್ಬ ಧೈತ್ಯ ಪ್ರತಿಭೆ. ಪತ್ರಕರ್ತರು, ಹೋರಾಟಗಾರರು, ಬರಹಗಾರರಿಗೆ ಅವರು ಪ್ರೇರಣೆಯಾಗಿದ್ದರು.
ಡಾ.ಬಿ.ಎಂ.ಗುರುನಾಥ್, ಉಪನ್ಯಾಸಕ