ಮೈಸೂರು: ವೈಟ್ ಬೋರ್ಡ್ ರ‌್ಯಾಪಿಡೊ ವಾಹಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಮೈಸೂರು ಆಟೋ ಚಾಲಕರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಸಿದ್ದಾರ್ಥ ಬಡಾವಣೆಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಬೆಂಗಳೂರಿನಲ್ಲಿ ನಡೆದ ಬಂದ್‌ಗೆ ಬೆಂಬಲ ಸೂಚಿಸಿದ ಚಾಲಕರು, ರ‌್ಯಾಪಿಡೊ ವೈಟ್ ಬೋರ್ಡ್ ವಾಹನಗಳ ಮೂಲಕ ಸೇವೆ ಒದಗಿಸುತ್ತಿದೆ. ಇದರಿಂದ ಹೆಚ್ಚು ತೆರಿಗೆ ಕಟ್ಟುವ ಹಳದಿ ಬೋರ್ಡ್ ಇರುವ ವಾಹನ ಮಾಲೀಕರು, ಚಾಲಕರಿಗೆ ತೊಂದರೆ ಅಗುತ್ತಿದೆ. ಈ ನಡುವೆ ವೈಟ್ ಬೋರ್ಡ್ ವಾಹನಗಳು ರ‌್ಯಾಪಿಡೊ ಬಳಸಬಹುದು ಎಂದು ಹೈಕೋರ್ಟ್‌ನಲ್ಲಿ ತಂದಿರುವ ತಡೆಯಾಜ್ಞೆ ತೆರವಿಗೆ ಸರ್ಕಾರ ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಅಧೀಕ್ಷಕ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಮೈಸೂರು ಆಟೋರಿಕ್ಷಾ ಸರ್ವಿಸ್ ಟ್ರಸ್ಟ್ ಅಧ್ಯಕ್ಷ ಸಾಯಿಬಾಬ ಬಿ.ನಾಗರಾಜು, ಪದಾಧಿಕಾರಿಗಳಾದ ಲಕ್ಷ್ಮೀನಾರಾಯಣ, ಸೋಮನಾಯಕ, ದೊಡ್ಡದೇವಪ್ಪ, ಕೆಂಪರಾಜೇ ಅರಸ್, ಶ್ರೀಕಾಂತ್, ಯೋಗೇಶ್, ಮಂಜುನಾಥ್, ಕೆ.ರವಿ ಇತರರು ಇದ್ದರು.