ಬೆಳಗಾವಿ: ಚಾಲಕರು ಮತ್ತು ಇತರೆ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ರಚಿಸುವಂತೆ ಒತ್ತಾಯಿಸಿ ರಾಜ್ಯ ಅಸಂಟಿತ ಕಾರ್ಮಿಕ ಸಂದ ನೇತೃತ್ವದಲ್ಲಿ ಕಾರ್ಮಿಕರು ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಚಾಲಕರು, ನಿರ್ವಾಹಕರು, ಮೆಕ್ಯಾನಿಕ್, ಕ್ಲೀನರ್, ರಸ್ತೆ ಬದಿ ಪಂಕ್ಚರ್ ಹಾಕುವವರು ಮತ್ತು ಟಿಂಕರಿಂಗ್ ಕೆಲಸ ಮಾಡುವ ಕಾರ್ಮಿಕರನ್ನೊಳಗೊಂಡಂತೆ ಸಾಮಾಜಿಕ ಭದ್ರತಾ ಮಂಡಳಿ ರಚಿಸುವಂತೆ ಹಲವು ಬಾರಿ ಕಾರ್ಮಿಕ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳಲಾಗಿದೆ. ಮನವಿಗೆ ಸ್ಪಂದಿಸಿ ಮಂಡಳಿ ಅನುಷ್ಠಾನಕ್ಕೆ ತಂದಿದ್ದೆ ಆದರೆ ರಾಜ್ಯದ 25 ಲಕ್ಕೂ ಹೆಚ್ಚು ಕಾರ್ಮಿಕರಿಗೆ ಮೂಲ ಸೌಕರ್ಯ ಒದಗಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಕಾರ್ಮಿಕ ಸಚಿವರು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಕಾರ್ಮಿಕ ಮಂಡಳಿ ರಚಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧ್ಯ ರಾಜೇಶ ಶೇರಖಾನೆ, ಉಪಾಧ್ಯ ಶಂಕರ ಭಂಗಿ, ರಾಜು ದಳವಾಯಿ, ಎಂ.ಬಿ.ಪಾಟೀಲ, ಮಹಾಂತೇಶ ಪಾಟೀಲ, ಗುರುಪಾದ ಕೋಲಕಾರ, ಗೌತಮ ಪಾಟೀಲ, ನಿಂಗಪ್ಪಾ ಕಮಲದಿನ್ನಿ, ಶಿವಾನಂದ ಕೆಂಪಣ್ಣಗೋಳ ಸೇರಿ ಇತರರು ಭಾಗವಹಿಸಿದ್ದರು.