ಜಿಲ್ಲೆ

ರೌಡಿಶೀಟರ್ ಬರ್ಬರ ಹತ್ಯೆ

ಹಾಸನ: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಚನ್ನಪಟ್ಟಣದಲ್ಲಿ ನಡೆದಿದೆ.

ತಾಲೂಕಿನ ಸೌದ್ರಳ್ಳಿ ಗ್ರಾಮದ ರಖಿತಾ ಆಲಿಯಾಸ್ ಗಾಂಜಾ ಗುಂಡ (34) ಕೊಲೆಯಾದ ರೌಡಿಶೀಟರ್. 2015 ರಲ್ಲಿ ಆಪ್ ಮರ್ಡರ್ ಕೇಸ್‌ನ ಆರೋಪಿಯಾಗಿದ್ದ. ನಂತರ ಈತನ ಮೇಲೆ ರೌಡಿಶೀಟರ್ ತೆರೆಯಲಾಗಿತ್ತು. ಬುಧವಾರ ರಾತ್ರಿ ವೈನ್ಸ್ ಶಾಪ್‌ನಲ್ಲಿ ಕುಡಿಯುವಾಗ ಕ್ಷುಲ್ಲಕ ಕಾರಣಕ್ಕೆ ಕೆಲ ಯುವಕರಿಗು ರಖಿನಾಗೂ ಗಲಾಟೆ ನಡೆದಿತ್ತು.

ಆದಾದ ಬಳಿಕ ರಖಿನಾ ಆಟೋದಲ್ಲಿ ಕುಳಿತು ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದ. ಆನಂತರ ಮಾರಕಾಸ್ತ್ರಗಳೊಂದಿಗೆ ದಾಳಿ ಮಾಡಿರುವ ಹಂತಕರು ರನಿಖಾನನ್ನು ಕೊಚ್ಚಿ ಕೊಲೆಗೈದು ಎಸ್ಕೇಪ್ ಆಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.