ಜಿಲ್ಲೆ

ರೌಡಿಗಳಿಗೆ ಪೊಲೀಸರ ಕ್ಲಾಸ್​

ಕಲಬುರಗಿ: ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಸಮಾಜದ, ಸರ‍್ವಜನಿಕರ ಶಾಂತಿ ಮತ್ತು ನೆಮ್ಮದಿಗೆ ಭಂಗ ತರುವ ರೌಡಿ ಶೀಟರ್​ಗಳ ಪರೇಡ್​ ನಡೆಸಿದ ನಗರದ ವಿವಿಧ ಪೊಲೀಸ್​ ಠಾಣೆಗಳ ಪೊಲೀಸರು, ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಹುಷಾರ್​ ಎಂದು ಎಚ್ಚರಿಕೆ ನೀಡಿದರು.

ನಗರದ ೧೦ ಪೊಲೀಸ್​ ಠಾಣೆಯಲ್ಲಿ ೨೧೬ ರೌಡಿಗಳನ್ನು ಕರೆಸಿ, ಶಾಂತಿ ಮಂತ್ರ ಬೋಧಿಸಿದರು. ಪದೇ ಪದೆ ದುಷತ್ಯಗಳಲ್ಲಿ ಭಾಗವಹಿಸಿದರೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಗುಂಡಾ ಕಾಯ್ದೆಯನ್ನು ಹಾಕಿ ಗಡಿಪಾರು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ. ನರ‍್ದೇಶನದಂತೆ ಕಾನೂನು ಸುವ್ಯವಸ್ಥೆಯ ೧೦ ಠಾಣೆಗಳಲ್ಲಿ ಶಾಂತಿಗೆ ಭಂಗ ಆಗುವ ಪ್ರಕರಣಗಳಲ್ಲಿ ಭಾಗಿಯಾಗಬಾರದು. ಸನ್ನಡತೆಯಿಂದ ಜೀವನ ನಡೆಸಲು ಖಡಕ್​ ಸೂಚನೆ ನೀಡಿದರು.

ಸಬ್​ ರ‍್ಬನ್​ ಠಾಣೆಯಲ್ಲಿ ಸಂತೋಷ ತಟ್ಟೆಪಲ್ಲಿ, ಅಶೋಕ ನಗರ ಠಾಣೆಯಲ್ಲಿ ಅರುಣಕುಮಾರ, ಬ್ರಹ್ಮಪುರ ಠಾಣೆಯಲ್ಲಿ ಸೋಮಶೇಖರ ಕಿರದಳ್ಳಿ, ಚೌಕ್​ ಠಾಣೆಯಲ್ಲಿ ರಾವೇಂದ್ರ ಭಜಂತ್ರಿ, ಸ್ಟೇಷನ್​ ಬಜಾರ್​ನಲ್ಲಿ ಶಕೀಲ್​ ಅಂಗಡಿ, ರಾವೇಂದ್ರ ನಗರ ಠಾಣೆಯಲ್ಲಿ ಕುಬೇರ ರಾಯಮಾನೆ ಸೇರಿ ವಿವಿಧ ಠಾಣೆಗಳಲ್ಲಿ ರೌಡಿ ಪರೇಡ್​ ನಡೆಸಲಾಯಿತು. ಎಸಿಪಿಗಳಾದ ಭೂತೇಗೌಡ, ರಾಜಣ್ಣ ಸೇರಿ ಹಿರಿಯ ಅಧಿಕಾರಿಗಳು ಪರೇಡ್​ನಲ್ಲಿ ಭಾಗವಹಿಸಿ, ರೌಡಿಗಳಿಗೆ ಕ್ಲಾಸ್​ ತೆಗೆದುಕೊಂಡರು.

ಠಾಣೆ ರೌಡಿಗಳು

ಸಬ್​ ರ‍್ಬನ್​ ೨೮

ಅಶೋಕ ನಗರ ೩೦

ಬ್ರಹ್ಮಪುರ ೨೭

ಚೌಕ್​ ೧೪

ಆರ್​ಜಿ ನಗರ ೨೬

ಸ್ಟೇಷನ್​ ಬಜಾರ್​ ೧೩

ವಿಶ್ವವಿದ್ಯಾಲಯ ೧೮

ರೋಜಾ ೧೮

ಎಂಬಿ ನಗರ ೨೦

ರಹತಾಬಾದ್​ ೨೨