ಕಲಬುರಗಿ: ನಗರದ ಆರೀಫ್ ಕಾಲನಿಯ ನಿವಾಸಿಯಾಗಿದ್ದ ರೌಡಿ ಶೀಟರ್ ಮಹ್ಮದ ಜಾಕೀರ ಅಲಿಯಾಸ್ ಮಾಮೂ ಡಾನ್ ಎಂಬಾತನನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಯುಕ್ತ ಸತೀಶಕುಮಾರ ಮತ್ತು ಡಿಸಿಪಿ ಕಿಶೋರಬಾಬು ತಿಳಿಸಿದ್ದಾರೆ.
ಅಸ್ಲಂ ಪಟೇಲ್ ಅಲಿಯಾಸ್ ಬಾಂಬೆ ಅಸ್ಲಂ, ರುಕ್ಮೋದ್ದೀನ್ ಬಾಬು ಅಲಿಯಾಸ್ ಜಾವನಿ ಬಾಬಾ, ಮೆಹಬೂಬ ಪಟೇಲ್ ಅಲಿಯಾಸ್ ಬಬ್ಲು ಮತ್ತು ಮಹ್ಮದ ಸದ್ದಾಂ ಹುಸೇನಿ ಅಲಿಯಾಸ್ ಲಂಗಡು ಸದ್ದಾಂ ಬಂಧಿತ ಅರೋಪಿಗಳು. ಹಣಕಾಸಿನ ವಿಷಯವಾಗಿಯೇ ಆತನನ್ನು ಕೊಲೆ ಮಾಡಿರುವುದಾಗಿ ವಿಚಾರಣೆಯಲ್ಲಿ ಹೇಳಿಕೊಂಡಿದ್ದಾರೆ.
ಮಾ.17 ರಂದು ಅರೀಫ್ ಕಾಲನಿಯ ಸುಯಿ ಗುಮ್ಮಜ್ ಹತ್ತಿರದ ನಿಮರ್ಾಣ ಹಂತದ ಮನೆಯಲ್ಲಿ ಮಾಮೂ ಡಾನ್ನನ್ನು ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಸಿಪಿ ವಿಜಯಕುಮಾರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಅರುಣಕುಮಾರ ಮುರಗುಂಡಿ ಮತ್ತು ಸಿಬ್ಬಂದಿ ರಮೇಶ, ಕಿಶೋರ, ಮುಜಾಹೀದ್ ಇತರರಿದ್ದ ತಂಡದ ಕಾಯರ್ಾಚರಣೆ ಆರೋಪಿತರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.