ಚಿತ್ರದುರ್ಗ:ಸಮಾಜಮುಖಿ ಕೆಲಸಗಳಲ್ಲಿ ನಿರತವಾಗಿರುವ ರೋಟರಿ ಸಂಸ್ಥೆ ಜನರಿಗೆ ಅಗತ್ಯವಿರುವ ಆರೋಗ್ಯ ಸೌಲಭ್ಯಗಳನ್ನು ಒದಗಿಸುವಲ್ಲೂ ಕಾಳಜಿ ವಹಿಸುತ್ತಿದೆ ಎಂದು ರೋಟರಿ ಕ್ಲಬ್‌ನ ಡಾ. ಸಾಧುಗೋಪಾಲಕೃಷ್ಣ ಹೇಳಿದರು.
ರೋಟರಿ ಕ್ಲಬ್‌ಆಫ್ ಚಿತ್ರದುರ್ಗದಿಂದ ಚಳ್ಳಕೆರೆ ರಸ್ತೆಯ ಕೃಷ್ಣಪ್ಪ ಲೇಔಟ್‌ನಲ್ಲಿ ನೂತನವಾಗಿ ನಿರ್ಮಿಸಿರುವ 10 ಹಾಸಿಗೆಗಳ ಡಯಾಲಿಸಿಸ್, ಕೌಶಲಾಭಿವೃದ್ಧಿ, ಪಿಸಿಯೋಥೆರಪಿ ಹಾಗೂ ಪ್ರಯೋಗಾಲಯ ಕೇಂದ್ರಗಳನ್ನು ಬುಧವಾರ ಉದ್ಘಾಟಿಸಿ ಮಾತನಾಡಿ, ಸಂಸ್ಥೆ ಆರಂಭದಿಂದಲೂ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡು ಬಂದಿದೆ ಎಂದರು.
ರೋಟರಿ ಟ್ರಸ್ಟ್ ಕಾರ್ಯದರ್ಶಿ ಕೆ. ಮಧುಪ್ರಸಾದ್ ಮಾತನಾಡಿ, ರೋಟರಿ ಕ್ಲಬ್ ಚಿತ್ರದುರ್ಗದಲ್ಲಿ ಪ್ರಾರಂಭವಾಗಿ 60 ವರ್ಷ ತುಂಬಿದ ಈ ಸಂದರ್ಭದಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪಿಸಿದೆ. ಮರ್ಚೆಂಟ್‌ಬ್ಯಾಂಕ್ ಅಧ್ಯಕ್ಷ ಲಕ್ಷ್ಮೀಕಾಂತ ರೆಡ್ಡಿ ಹಾಗೂ ಎಸ್. ವೀರೇಶ್ ಅವರ ಆರ್ಥಿಕ ನೆರವಿನೊಂದಿಗೆ ನಿವೇಶನ ಪಡೆಯಲಾಗಿತ್ತು ಎಂದರು.
ಕೌಶಲಾಭಿವೃದ್ಧಿ ಕೇಂದ್ರಕ್ಕೆ ಶಿರಸಿ ಯುವಜಯ ಫೌಂಡೇಷನ್‌ನ ಸಹಯೋಗವಿದೆ. ಬಿ.ಎ., ಬಿಕಾಂ, ಬಿಎಸ್ಸಿ ಪಧವೀಧರರಿಗೆ ಸಂವಹನ, ಟೀಮ್‌ವರ್ಕ್, ಸ್ಪೀಕಿಂಗ್‌ಇಂಗ್ಲಿಷ್ ಇತ್ಯಾದಿ 2-3 ತಿಂಗಳ ಅವಧಿ ತರಬೇತಿ ನೀಡಲಾಗುವುದು. ಇಲ್ಲಿ ಕ್ಲಿನಿಕ್ ಹಾಗೂ ಫಾರ್ಮಸಿ ಸೌಲಭ್ಯಗಳೂ ಇದೆ ಎಂದರು.
ಎಂಎಲ್‌ಸಿ ಕೆ.ಎಸ್. ನವೀನ್, ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್, ಮರ್ಚೆಂಟ್ಸ್ ಬ್ಯಾಂಕ್ ಅಧ್ಯಕ್ಷ ಎಸ್.ಆರ್. ಲಕ್ಷ್ಮೀಕಾಂತ ರೆಡ್ಡಿ, ರೋಟರಿ ಸಂಸ್ಥೆಯ ರವಿ ವಡ್ಲಮಣಿ, ರವೀಂದ್ರ, ರಮೇಶ್‌ವಂಗಲ, ರೋಟರಿ ಟ್ರಸ್ಟ್ ಅಧ್ಯಕ್ಷ ಪಿ.ಎಸ್. ಶಂಭುಲಿಂಗಪ್ಪ, ರೋಟರಿ ಕ್ಲಬ್ ಅಧ್ಯಕ್ಷ ಜಿ.ಎನ್. ವೀರಣ್ಣ, ಎಸ್. ವೀರೇಶ್, ಕೆ.ಎಸ್. ಚಂದ್ರಮೋಹನ್, ಜಯಶ್ರೀಷಾ, ತರುಣ್‌ಷಾ, ಮೂರ್ತಿ, ವೆಂಕಟೇಶ್, ವಿಶ್ವನಾಥ್, ಸೂರ್ಯನಾರಾಯಣ ಇತರರು ಇದ್ದರು.