ಜಿಲ್ಲೆ

ರೋಟರಿಯಿಂದ ಸೆ.14ರಿಂದ ನೈರ್ಮಲ್ಯ ಜಾಗೃತಿ ಕುರಿತು ಕಾರ್ಯಾಗಾರ

ಮೈಸೂರು: ಮೈಸೂರು ಪೂರ್ವ ರೋಟರಿ ಸಂಸ್ಥೆಯಿಂದ ಸೆ.14ರಂದು ಘನತ್ಯಾಜ್ಯ ನಿರ್ವಹಣೆ, ಋತುಸ್ರಾವದ ನೈರ್ಮಲ್ಯ ಜಾಗೃತಿ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷೆ ಎಲಿಜಬೆತ್ ಶಕುಂತಲಾ ತಿಳಿಸಿದುರ.
ಲಲಿತಮಹಲ್ ರಸ್ತೆಯ ಮಾಲ್‌ಆಫ್ ಮೈಸೂರು ಬಳಿಯ ಅರಸು ಜಮ್‌ಖಾನ ಕ್ಲಬ್‌ನಲ್ಲಿ ಅಂದು ಸಂಜೆ 7ಕ್ಕೆ ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳ ಶಾಲಾ ಕಾಲೇಜು ವಿದ್ಯಾರ್ಥಿನಿಯರು, ಮಹಿಳಾ ಗುಂಪುಗಳ ಸದಸ್ಯರು ಭಾಗವಹಿಸಬಹುದು. ಪರಿಸರ ಪ್ರಜ್ಞೆ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಲ್ಲಿ ತಿಳಿಸಿದರು.
ಏಕ ಬಳಕೆಯ ಪ್ಲಾಸ್ಟಿಕ್‌ಗಳನ್ನು ಇತ್ತೀಚೆಗೆ ಹೆಚ್ಚಾಗಿ ಬಳಸುವುದು ನಡೆದಿದ್ದು, ಇದರ ಬದಲು ಬಟ್ಟೆಗಳಿಂದ ತಯಾರಿಸಿದ ಸ್ಯಾನಿಟರಿ ಪ್ಯಾಡ್ ಬಳಕೆ ಕುರಿತು ಅರಿವು ಮೂಡಿಸಲಾಗುತ್ತಿದೆ.
ಸಂಸ್ಥೆಯ ಕಾರ್ಯದರ್ಶಿ ಲತಾ ಕುಮಾರ್, ಕಾರ್ಯಕ್ರಮ ಸಂಯೋಜಕರಾದ ಸಹನಾ, ಚೈತ್ರ ಇದ್ದರು.