ಜಿಲ್ಲೆ

ರೋಟರಿಯಿಂದ ಡಿ.7ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರ

reportermys

ಮೈಸೂರು: ರೋಟರಿ ಕ್ಲಬ್ ಆಫ್ ಮೈಸೂರು ಸೌತ್ ಈಸ್ಟ್‌ನಿಂದ ಡಿ.7ರಂದು ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ.
ವಿವಿಧ ವಾರ್ಡ್‌ಗಳು, ಸುಯೋಗ್, ಚಂದ್ರಕಲಾ ಆಸ್ಪತ್ರೆ, ರೋಟ್ರಾಕ್ಟ್ ಎಂಐಟಿ-ಎಫ್‌ಜಿಸಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬಾಸುದೇವ ಸೋಮಾನಿ ಕಾಲೇಜು ಸಹಯೋಗದಲ್ಲಿ ಬೃಹತ್ ಶಿಬಿರ ಆಯೋಜಿಸಲಾಗಿದೆ ಎಂದು ರೋಟರಿ ಅಧ್ಯಕ್ಷ ಎಂ. ಮೋಹನ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿವೇಕಾನಂದ ವೃತ್ತದ ಬಳಿ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂದು ಬೆಳಗ್ಗೆ 9 ಗಂಟೆಗೆ ಚುನಾಯಿತ ಜಿಲ್ಲಾ ಗರ್ವನರ್ ಎಚ್.ಆರ್. ಕೇಶವ್ ಶಿಬಿರಕ್ಕೆ ಚಾಲನೆ ನೀಡಲಿದ್ದಾರೆ. ಮಾಜಿ ಮೇಯರ್ ಸುನಂದಾ ಪಾಲನೇತ್ರ, ನಗರಪಾಲಿಕೆ ಸದಸ್ಯರಾದ ಎಂ.ಸಿ.ರಮೇಶ್, ಲಕ್ಷ್ಮೀ ಕಿರಣ್, ಶೋಭಾ ಸುನೀಲ್, ಗೀತಾಶ್ರೀ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜೆ.ಗೋವಿಂದರಾಜು, ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜಗೌಡ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್. ರಾಗಿಣಿ, ತಾಯಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ ಡಾ.ಜಯಂತ್, ವಲಯ-8ರ ಸಹಾಯಕ ಗರ್ವನರ್ ಎಸ್.ವಾಸುದೇವ್, ವಲಯ ಸೇನಾನಿ ಆರ್.ರವೀಂದ್ರ ಇತರರು ಭಾಗವಹಿಸಲಿದ್ದಾರೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಕೆ.ಎನ್. ಮುರಳೀಧರ್, ರೋಟರಿ ಕ್ಲಬ್ ರಕ್ತನಿಧಿ ಬ್ಯಾಂಕ್‌ನ ಸಮೀರ್ ಕಶ್ಯಪ್, ಮೈಸೂರು ಸೌತ್ ಈಸ್ಟ್ ಅಧ್ಯಕ್ಷ ಎನ್.ಮಹೇಶ್‌ಕುಮಾರ್, ರೋಟ್ರಾಕ್ಟ್ ಎಂಐಟಿ ಎಫ್‌ಜಿಸಿ ಅಧ್ಯಕ್ಷ ವಿ. ಮನೋಜ್ ಕುಮಾರ್‌ಸಿಂಗ್ ಇತರರು ಇದ್ದರು.