ಜಿಲ್ಲೆ

ರೋಟರಿ ಹಾಗೂ ಲಾಯನ್ಸ ಸಂಸ್ಥೆ ಗದಗ ಸಿಟಿಯಿಂದ ಕಂಪ್ಯೂಟರ್ ದೇಣಿಗೆ

ಗದಗ: ರೋಟರಿ ಕ್ಲಬ್ ಗದಗ-ಬೆಟಗೇರಿ ಹಾಗೂ ಲಾಯನ್ಸ ಸಂಸ್ಥೆ ಗದಗ ಸಿಟಿಯವತಿಯಿಂದ ಡಿ. ಆರ್. ಪಾಟೀಲ ಬಡಾವಣೆಯಲ್ಲಿರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ೧೯ಕ್ಕೆ ಲಾಯನ್ಸ ಜಿಲ್ಲಾ ೨೦೨೩-೨೩ನೇ ಯೋಜನೆಯಡಿ ಕಂಪ್ಯೂಟರನ್ನು ದೇಣಿಗೆ ನೀಡಾಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶ್ರೀಮತಿ ಶ್ರೀದೇವಿ ಗೊಂದಿಯವರು ಶಾಲೆಯ ಪರವಾಗಿ ದೇಣಿಗೆ ಸ್ವೀಕರಿಸಿ ಧನ್ಯವಾದಗಳನ್ನು ತಿಳಿಸಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಗದಗ ಶಹರ ಬಿಇಒ ಶ್ರೀ ಆರ್.ಎಸ್.ಬುರಡಿಯವರು ಸಭೆಯನ್ನು ಉದ್ಧೇಶಿಸಿ ಮಾತನಾಡುತ್ತಾ ರೋಟರಿ ಹಾಗೂ ಲಾಯನ್ಸ ಸಂಸ್ಥೆ ಗದಗ ಸಿಟಿಯು ಆರ್ಥಿಕವಾಗಿ ಹಿಂದುಳಿದ ಸಮುದಾಯವಿರುವ ಪ್ರದೇಶದ ಶಾಲೆಯನ್ನು ಆಯ್ಕೆಮಾಡಿ ಮಕ್ಕಳಿಗೆ ಆಧುನಿಕ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಟ್ಟಿದ್ದು ಅತ್ಯಂತ ಶ್ಲಾಘನೀಯವೆಂದರು. ಪ್ರಸಕ್ತವಾದ ಡಿಜಿಟಲ್ ಜಗತ್ತಿನಲ್ಲಿ ಕಂಪ್ಯೂಟರ್‌ನ ಜ್ಞಾನವು ಎಲ್ಲ ವಯೋಮಾನದ ಜನರಿಗೆ ಅನಿವಾರ್ಯವಾಗಿದೆ ಕಾರಣ ಇಂದು ಸಂಸ್ಥೆಯು ನೀಡಿದ ಕಂಪ್ಯೂಟರ್ ಆಧುನಿಕ ಶಿಕ್ಷಣ ಹಾಗೂ ಮಕ್ಕಳ ವಿಧ್ಯಾಭ್ಯಾಸದ ನಡುವೆ ಒಂದು ಸೇತುವೆಯಾಗಿಲಿದೆ ಎಂದರು.
ಇತ್ತೀಚನಗೆ ವಿದ್ಯಾಭ್ಯಾಸವು ಬರಿ ಶಾಲೆಗಳಲ್ಲಿ ಅಷ್ಟೆ ಅಲ್ಲದೆ ಫೇಸ್ ಬುಕ್, ಯುವ್ ಟ್ಯೂಬ್ ಹಾಗೂ ಅನೇಕ ಅಂತರ್‌ಜಾಲತಾಣದಲ್ಲಿ ಲಭಿಸಲಿದೆ. ಕೋವಿಡ್ ಮಾಹಾಮಾರಿಯಲ್ಲಂತು ಪ್ರತಿಯೊಬ್ಬರಿಗೂ ಕಂಪ್ಯಾಟರ್ ಹಾಗೂ ಮೊಬೈಲೇ ಜನಜೀವನದ ಸಂಪರ್ಕ ಕೊಂಡಿಯಾಗಿತ್ತು. ಕಂಪ್ಯೂಟರ್ ಅಥವಾ ಮೊಬೈ¯ನ್ನು ಮಕ್ಕಳು ಉತ್ತಮ ವಿದ್ಯಾಭ್ಯಾಸದ ಮತ್ತು ಸಂಪರ್ಕದ ಸಾಧನವಾಗಿ ಎಚ್ಚರದಿಂದ ಉಪಯೋಗಿಸಬೇಕೆಂದು ರೋಟರಿ ಸಂಸ್ಥೆಯ ಅಧ್ಯಕ್ಷರಾದ ಚಂದ್ರಮೌಳಿ ಜಾಲಿಯವರು ತಿಳಿಸಿದರು. ಲಾಯನ್ಸ ಸಂಸ್ಥೆ ಗದಗ ಸಿಟಿಯ ಅಧ್ಯಕ್ಷರಾದ ಸತೀಷ ಶಾಬಾದಿಮಠರವರು ಸಂಧರ್ಬೋಚಿತವಾಗಿ ಮಾಡನಾಡಿರು. ಕಾರ್ಯಕ್ರಮದಲ್ಲಿ ಮೊದಲಿಗೆ ಶಿಕ್ಷಕರಾದ ಎಮ್. ಎಸ್. ಬನ್ನಿಕಟ್ಟಿಯವರು ಎಲ್ಲರನ್ನೂ ಸ್ವಾಗತಿಸಿ ಪುಷ್ಪಗುಚ್ಛನೀಡಿ ಗೌರವಿಸಿದರು.
ಈ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ವೀಣಾ ತಿರ್ಲಾಪೂರ, ರೋಟರಿ ಸಂಸ್ಥೆಯ ಸದಸ್ಯರಾದ ವಿಶ್ವನಾಥ ಯಳಮಲಿ ಶಿವಾಚಾರ್ಯ ಹೊಸಳ್ಳಿಮಠ, ಅಕ್ಷಯ ಶೆಟ್ಟಿ, ಶ್ರೀಮತಿ ಕಮಲಾಕ್ಷಿ ಅಂಗಡಿ, ಹಿರಿಯರಾದ ಶ್ರೀ ಇಮಾಮಸಾಬ ರೋಣದ, ಶಿಕ್ಷಕರು, ವಿದ್ಯಾರ್ಥಿಗಳು ಮುಂತಾದವರು ಉಪಸ್ಥಿತರಿದ್ದರು ಶಾಲೆಯ ಮುಖ್ಯೋಪಾಧ್ಯಾಯರಾದ ಕೆ.ಎನ್. ದೇಸಾಯಿಯವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.