ಸೋಮವಾರಪೇಟೆ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ಹೃದ್ರೋಗ ತಪಾಸಣಾ ಶಿಬಿರದಲ್ಲಿ ರೋಟರಿ ವಲಯ ಸೇನಾನಿ ಲಿಖಿತ್ ಮಾತನಾಡಿದರು. ಲೋಕೇಶ್, ಆದರ್ಶ್ ಇದ್ದರು.  
ಜಿಲ್ಲೆ

ರೋಟರಿ ಸದಸ್ಯರಿಗೆ ಹೃದ್ರೋಗ ತಪಾಸಣೆ

Kodagu

ಸೋಮವಾರಪೇಟೆ: ಪಟ್ಟಣದ ಮಹಿಳಾ ಸಮಾಜದಲ್ಲಿ ಮೈಸೂರು ಮಣಿಪಾಲ್ ಹಾಸ್ಪಿಟಲ್ ವತಿಯಿಂದ ಶನಿವಾರ ಸೋಮವಾರಪೇಟೆ ರೋಟರಿ ಸದಸ್ಯರಿಗೆ ಉಚಿತ ಹೃದ್ರೋಗ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.


ರೋಟರಿ ವಲಯ ಸೇನಾನಿ ಎಂ.ಡಿ.ಲಿಖಿತ್ ಶಿಬಿರ ಉದ್ಘಾಟಿಸಿ ಮಾತನಾಡಿ, ಸಮಾಜಮುಖಿ ಕೆಲಸ ಮಾಡುವ ರೋಟರಿ ಸದಸ್ಯರ ಆರೋಗ್ಯ ಮುಖ್ಯವಾಗಿದೆ. ಆರೋಗ್ಯವಂತ ವ್ಯಕ್ತಿ ದೇಶದ ಸಂಪತ್ತು ಎಂದು ತಿಳಿದಿರುವ ಮಣಿಪಾಲ್ ಆಸ್ಪತ್ರೆಯವರು ಉಚಿತವಾಗಿ ತಪಾಸಣೆ ನಡೆಸಿ ಸಲಹೆ ನೀಡಿರುವುದು ಶ್ಲಾಘನೀಯ ಎಂದರು.


ವೇದಿಕೆಯಲ್ಲಿ ರೋಟರಿ ಅಧ್ಯಕ್ಷ ಎಚ್.ಸಿ.ಲೋಕೇಶ್, ಕಾರ್ಯದರ್ಶಿ ಆದರ್ಶ್ ಇದ್ದರು.