ಜಿಲ್ಲೆ

ರೋಟರಿ ಸಂಸ್ಥೆ ಸೇವೆ ಶ್ಲಾಘನೀಯ

ಕೊಳ್ಳೇಗಾಲ: ರೋಟರಿ ಸಂಸ್ಥೆ ನಡೆಸುತ್ತಿರುವ ಸೇವಾ ಕಾರ್ಯಗಳು ಶ್ಲಾಘನೀಯ ಎಂದು ಆರ್ಯ ವೈಶ್ಯ ಸಮಾಜದ ತಾಲೂಕು ಅಧ್ಯಕ್ಷ ಎ.ಡಿ.ಕುಮಾರಕೃಷ್ಣ ಹೇಳಿದರು.

ವಾಸವಿ ಹಾಸ್ಪಿಟಲ್ ಬೆಂಗಳೂರು ಹಾಗೂ ರೋಟರಿ ಕ್ಲಬ್ ಕೊಳ್ಳೇಗಾಲ ವತಿಯಿಂದ ಹೃದಯ, ಮೂಳೆ ಮತ್ತು ಕೀಲು ತಪಾಸಣಾ ಉಚಿತ ಶಿಬಿರಕ್ಕೆ ಪಟ್ಟಣದ ರೋಟರಿ ಕ್ಲಬ್‌ನಲ್ಲಿ ಬುಧವಾರ ಚಾಲನೆ ನೀಡಿ ಮಾತನಾಡಿ, ರೋಟರಿ ಕ್ಲಬ್ ಮತ್ತು ವಾಸವಿ ಹಾಸ್ಟಿಟಲ್ ಸಹಯೋಗದಲ್ಲಿ ಸಮಾಜದ ಆರೋಗ್ಯ ದೃಷ್ಟಿಯಿಂದ ಅರ್ಥಪೂರ್ಣವಾದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ರೋಟರಿ ಕ್ಲಬ್ ತಾಲೂಕು ಅಧ್ಯಕ್ಷ ಮಹದೇವ ಮಾತನಾಡಿ, ರೋಟರಿ ಸಂಸ್ಥೆ ನಿರಂತರವಾಗಿ ಶಿಕ್ಷಣ, ಆರೋಗ್ಯಕ್ಕೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ಬಂದಿದೆ. ಸಮಾಜದ ನಡುವೆ ಬೆಳೆದ ಸಂಸ್ಥೆಯಾಗಿ ಅದೇ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕೆಂಬ ಉದ್ದೇಶ ಹೊಂದಿದೆ ಎಂದರು.

ಶಿಬಿರದಲ್ಲಿ ಸುಮಾರು 90ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ರೋಟರಿ ಕ್ಲಬ್ ಅಧ್ಯಕ್ಷ ಮಹದೇವ, ಕಾರ್ಯದರ್ಶಿ ಬಿ.ಕೆ.ಪ್ರಕಾಶ್, ಸಹಾಯಕ ಪ್ರಾಂತಪಾಲ ಬಸವರಾಜು, ವೆಂಕಟಾಚಲ, ಡಾ.ಕೃಷ್ಣ ಕುಮಾರ್, ಡಾ.ವೈಷವಿ ಮತ್ತಿತರಿದ್ದರು.