ಜಿಲ್ಲೆ

ರೋಟರಿ ಮಿಸ್ಟಿಹಿಲ್ಸ್‌ನಿಂದ ನಾಯಕತ್ವ ಶಿಬಿರ

ಮಡಿಕೇರಿ: ರೋಟರಿ ಮಿಸ್ಟಿಹಿಲ್ಸ್ ಮಡಿಕೇರಿ ವತಿಯಿಂದ ಎರಡು ವಿಭಾಗಗಳಲ್ಲಿ ರೋಟರಿ ನಾಯಕತ್ವ ಶಿಬಿರನಡೆಯಿತು.

ನಗರದ ರೋಟರಿ ಹಾಲ್‌ನಲ್ಲಿ ನಡೆದ ಶಿಬಿರಕ್ಕೆ ರೋಟರಿ ೩೧೮೧ನ ವಿವಿಧ ಜಿಲ್ಲಾ ಹಾಗೂ ಕ್ಲಬ್‌ಗಳಿಂದ ಸುಮಾರು ೫೮ ಸದಸ್ಯರು ಆಗಮಿಸಿ ತರಬೇತಿ ಪಡೆದರು. ಸಂಪನ್ಮೂಲ ವ್ಯಕ್ತಿಗಳಾಗಿ ರೋಟರಿ ತರಬೇತಿ ಸಂಸ್ಥೆಯ ಕೇಂದ್ರ ಮುಖ್ಯಸ್ಥ ಪಿ.ಡಿ.ಜಿ.ರೋಟರಿಯನ್ ರಾಜೇಂದ್ರ ರೈ, ಹಿರಿಯ ಸಂಪನ್ಮೂಲ ವ್ಯಕ್ತಿ ರೋಟರಿಯನ್ ಪಿ.ಡಿ.ಜಿ ಅನಂತ್, ಸಂಯೋಜಕ ಪ್ರಕಾಶ್ ಬಳ್ವಾಡಿ ಹಾಗೂ ಪ್ರಸಾದ್ ಶಿಬಿರದಲ್ಲಿ ಪಾಲ್ಗೊಂಡಿದ್ದರು.

ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ರೋಟರಿಯನ್ ಬಿ.ಎನ್.ರತ್ನಾಕರ ರೈ, ಕಾರ್ಯದರ್ಶಿ ಬಿ.ಕೆ.ಕಾರ್ಯಪ್ಪ, ಕಾರ್ಯಕ್ರಮ ಮುಖ್ಯಸ್ಥ ಸುಮಂತ್ ಪಾಲಾಕ್ಷ, ಜಿಲ್ಲಾ ಆರ್.ಎಲ್.ಐ ಸಹ ಮುಖ್ಯಸ್ಥ ರೋಟರಿಯನ್ ಪ್ರಮೋದ್ ಕುಮಾರ್ ರೈ, ಕಾರ್ಯದರ್ಶಿ ರೋಟರಿಯನ್ ಹರೀಶ್ ಕುಮಾರ್, ಸಹಾಯಕ ಗವರ್ನರ್ ರೋಟರಿಯನ್ ದಿಲನ್ ಚೆಂಗಪ್ಪ, ವಲಯ ಲೆಫ್ಟಿನೆಂಟ್ ರೋಟರಿಯನ್ ಕಾರ್ಯಪ್ಪ ಉಪಸ್ಥಿತರಿದ್ದರು.