ಬೀದರ್: ಬೀದರ್ ಹೊರವಲಯದ ಚಿಕ್ ಪೇಟ ಹತ್ತಿರ ಸುಸಜ್ಜಿತ ರೋಟರಿ ಭವನ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಪಲ್ಸ್ ಪೋಲಿಯೋ ಅಭಿಯಾನ ಜಿಲ್ಲಾ ಸಂಚಾಲಕರಾದ ಹಿರಿಯ ರೊಟೇರಿಯನ್ ಬಸವರಾಜ ಧನ್ನೂರ್ ತಿಳಿಸಿದರು.
ರೋಟರಿ ಕ್ಲಬ್ ಆಫ್ ಬೀದರ್, ರೋಟರಿ ಕ್ಲಬ್ ನ್ಯೂ ಸೆಂಚ್ಯೂರಿ ಹಾಗೂ ರೋಟರಿ ಕ್ಲಬ್ ಬೀದರ್ ಫೋಟ್೯ ನಿಂದ ನಗರದ ಐಎಂಎ ಹಾಲ್ ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರೋಟರಿ ಇಂಟರ್ ನ್ಯಾಷನಲ್ 116ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಚಿಕ್ ಪೇಟ ಹತ್ತಿರ ರೋಟರಿ ಲೇಔಟ್ ನಿರ್ಮಾಣವಾಗುತ್ತಿದೆ. ಇಲ್ಲೇ ರೋಟರಿ ಭವನ ಸ್ಥಾಪಿಸಲು ನಿರ್ಣಯಿಸಲಾಗಿದೆ. ಎಲ್ಲರ ಸಹಾಯ, ಸಹಕಾರದಿಂದ ಎರಡು ವರ್ಷದೊಳಗೆ ಈ ಭವನ ನಿರ್ಮಿಸುವ ಉದ್ದೇಶವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಆಫ್ ಬೀದರ್ ಅಧ್ಯಕ್ಷ ಹಾವಶೆಟ್ಟಿ ಪಾಟೀಲ್ ಮಾತನಾಡಿ, ರೋಟರಿ ಸಂಸ್ಥೆಗಳು ಜಾತಿ, ಮತ, ಪಂಥ ಮರೆತು ಸಾಮಾಜಿಕ ಕೆಲಸಗಳಲ್ಲಿ ನಿರಂತರ ತೊಡಗಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ 12ಲಕ್ಷ ಸದಸ್ಯರು ನಿಷ್ಠೆಯಿಂದ ಸೇವೆ ಸಲ್ಲಿಸಿ ಸಮಾಜಕ್ಕೆ ಕೈಲಾದಷ್ಟು ನೆರವು ನೀಡುತ್ತಿದ್ದಾರೆ. ಬರುವ ಅವಧಿಯಗೆ ರೋಟರಿ ಇಂಟರ್ ನ್ಯಾಷನಲ್ಷ ಗೆ ಭಾರತದ ಶೇಖರ್ ಮೆಹ್ತಾ ಅಧ್ಯಕ್ಷರಾಗಲಿದ್ದಾರೆ. ಈ ಅವಧಿಯಲ್ಲಿ ರೋಟರಿ ಸದಸ್ಯತ್ವ ಹೆಚ್ಚಳ ಸೇರಿ ಅನೇಕ ಹೊಸ ಯೋಜನೆ ಜಾರಿಗೆ ಬರಲಿವೆ ಎಂದು ಹೇಳಿದರು.
ರೋಟರಿ ಮಾಜಿ ಜಿಲ್ಲಾ ಗವರ್ನರ್ ಚಂದ್ರಸೇನನ್, ಸಹಾಯಕ ಗವರ್ನರ್ ಡಾ.ಜಗದೀಶ ಪಾಟೀಲ್, ರೋಟರಿ ಸೆಂಚ್ಯೂರಿ ಅಧ್ಯಕ್ಷ ಸೂರ್ಯಕಾಂತ ರಾಮಶೆಟ್ಟಿ, ಕಾರ್ಯದರ್ಶಿ ಡಾ.ರಘು ಕೃಷ್ಣಮೂರ್ತಿ, ಪ್ರಮುಖರಾದ ಶಿವಕುಮಾರ, ಶಿವಶರಣಪ್ಪ ಚಿಟ್ಟಾ, ಸೋಮಶೇಖರ ಪಾಟೀಲ್, ಡಾ.ಕಪಿಲ್ ಪಾಟೀಲ್, ರಂಜೀತ ಪಾಟೀಲ್, ರವಿ ಮೂಲಗೆ, ವಿಲಾಸರಾವ ಮೋರೆ, ದಾದಾರಾವ ಕೋಳೆಕರ್ ಇತರರಿದ್ದರು. ಈ ವೇಳೆ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು.