ರೋಟರಿ ಮಲ್ಲೇಶ್ವರ ಸಂಸ್ಥೆ ವತಿಯಿಂದ ನಿರ್ಮಿಸಿರುವ ನೂತನ ರೋಟರಿ ಭವನ.  
ಜಿಲ್ಲೆ

ರೋಟರಿ ಭವನ ಉದ್ಘಾಟನೆ ನಾಳೆ

ಶನಿವಾರಸಂತೆ: ರೋಟರಿ ಮಲ್ಲೇಶ್ವರ ಸಂಸ್ಥೆ ವತಿಯಿಂದ ನಿರ್ಮಿಸಿರುವ ರೋಟರಿ ಭವನದ ನೂತನ ಕಟ್ಟಡದ ಉದ್ಘಾಟನೆ ಹಾಗೂ ಸಂಸ್ಥೆಯ 2023-24ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.23 ರಂದು ನಡೆಯಲಿದೆ.

ಅಂದು ಮಧ್ಯಾಹ್ನ 2 ಗಂಟೆಗೆ ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ಭವನ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಎಚ್.ಇ.ತಮ್ಮಯ್ಯ ವಹಿಸಲಿದ್ದು, ರೋಟರಿ ಕ್ಲಬ್ ಜಿಲ್ಲಾ ಸಹಾಯಕ ಪ್ರಾಮತಪಾಲ ಎಂ.ಡಿ.ಲಿಖಿತ್, ಪೂರ್ವ ಜಿಲ್ಲಾ ಪ್ರಾಂತಪಾಲ ಎಂ.ರಂಗನಾಥ್ ಭಟ್, ಸಂಸ್ಥೆ ಪ್ರಮುಖರಾದ ಪಿ.ಕೆ.ರವಿ, ರಂಗಸ್ವಾಮಿ, ದಿವಾಕರ್, ಎಂ.ಟಿ. ಬೇಬಿ, ರೋಟರಿ ಮಲ್ಲೇಶ್ವರ ನಿಯೋಜಿತ ಅಧ್ಯಕ್ಷ ಎಚ್.ಆರ್.ಉದಯ್‌ಕುಮಾರ್ ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಅಂದು ಸಂಜೆ 6 ಗಂಟೆಗೆ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ರೋಟರಿ ಭವನದಲ್ಲಿ ನಡೆಯಲಿದೆ. ರೋಟರಿ ಕ್ಲಬ್‌ನ ಪೂರ್ವ ಜಿಲ್ಲಾ ಪ್ರಾಮತಪಾಲ ಎಂ.ರಂಗನಾಥ್, ಸಹಾಯಕ ಪ್ರಾಮಯಪಾಲ ಎಂ.ಡಿ.ಲಿಖಿತ್, ವಲಯ ಸೇನಾನಿ ಎಚ್.ಎಂ.ದಿವಾಕರ್ ಇತರರು ಭಾಗವಹಿಸಲಿದ್ದಾರೆ.