ಹುಮನಾಬಾದ್: ರೋಟರಿ ಕ್ಲಬ್ ನಿರಂತರ ನಡೆಸುತ್ತಿರುವ ಜನಪರ ಕಾರ್ಯಗಳು ಶ್ಲಾಘನೀಯ ಎಂದು ಮಾಣಿಕನಗರ ಮಾಣಿಕಪ್ರಭು ಸಂಸ್ಥಾನದ ಕಾರ್ಯದರ್ಶಿ ಶ್ರೀ ಆನಂದರಾಜ ಪ್ರಭು ನುಡಿದರು.
ಪಟ್ಟಣದಲ್ಲಿ ಗುರುವಾರ ಏರ್ಪಡಿಸಿದ್ದ ರೋಟರಿ ಕ್ಲಬ್ ಹುಮನಾಬಾದ್ ಎಲೈಟ್ ಘಟಕದ ಉದ್ಘಾಟನೆ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ, ರೋಟರಿ ಕ್ಲಬ್ ಜಗತ್ತಿನಾದ್ಯಂತ ನಿಸ್ವಾರ್ಥ ಭಾವದಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಪ್ರತಿ ವ್ಯಕ್ತಿ ತಾನು ಗಳಿಸಿದ ಹಣದಲ್ಲಿ ಒಂದು ಪ್ರತಿಶತವಾದರೂ ಸಮಾಜಕ್ಕೆ ಬಳಸಿದಲ್ಲಿ ಜೀವನ ಸಾರ್ಥಕವಾಗಲಿದೆ ಎಂದರು.
ಕ್ಲಬ್ ಜಿಲ್ಲಾ ಗವರ್ನರ್ ಮಾಣಿಕ ಪವಾರ್ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಡಾ.ಶಿವಕುಮಾರ ಯಲಾಲ್, ಸಂಜಯ ಹತ್ತಿ, ಡಾ.ವಂಸತ ಪವಾರ ಇತರರಿದ್ದರು. ಹಿರಿಯ ರೋಟರಿಯನ್ ಓಮಿನಾ ಸತೀಶಬಾಬು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ನೂತನ ಪದಾಧಿಕಾರಿಗಳು: ನಾಗರಾಜ ಕರ್ಪೂರ (ಅಧ್ಯಕ್ಷ), ರಾಹುಲ್ ಬತಲಿ (ಉಪಾಧ್ಯಕ್ಷ), ಅಭಿಷೇಕ ಚಿದ್ರಿ (ಕಾರ್ಯದರ್ಶಿ), ಗೌತಮ ಕಾಂಬಳೆ (ಖಂಜಾಚಿ), ಪ್ರಕಾಶ ತಟಪಟಿ (ಸಂಘಟನಾ ಕಾರ್ಯದರ್ಶಿ) ಹಾಗೂ ವಿವಿಧ ಘಟಕಗಳ ಮುಖ್ಯಸ್ಥರಾಗಿ ನದೀಮ್ ಸಾಜೀದ್, ಡಾ.ಶಶಿಕಾಂತ ಹಾರಕೂಡ, ಪ್ರಶಾಂತ ಸಾಗರ, ಶರದ ನಾರಾಯಣಪೇಟಕರ್, ನಾಗಶೆಟ್ಟಿ ಲಕೋಟಿ, ಶಿವಕುಮಾರ ಖ್ಯಾಡ, ಅರವಿಂದ ನಿರ್ಣಾ, ನರೇಂದ್ರ ಪಟೇಲ್, ಶ್ರೀಧರ ಶೆಟ್ಟಿ, ಚನ್ನಮಲ್ಲಪ್ಪ ಪಾರಾ, ನಾಗನಾಥ ಕಮಠಾಣಕರ, ಶರಣಗೌಡ ಪಾಟೀಲ್, ಸಂದೀಪ ಜಾಜಿ, ಹರೀಶ ಅಗಡಿ, ಕರಣ ಪಾಟೀಲ್, ಚೈತ್ರೇಶ ಗಾದಾ, ದಯಾನಂದ ಪಾಟೀಲ್, ಶಾಂತಕುಮಾರ ತಾಂಡೂರ, ಸಂಗಮೇಶ ಸೀಗಿ, ಸಾಗರ ರಾಜ ವರ್ಮಾ, ಶರಣಬಸಪ್ಪ, ಸಂಜೀವಕುಮಾರ ಜುನ್ನಾ, ಉಮೇಶ ಬುಜ್ಜಿ, ಲಕ್ಷö್ಮಣ ನಂದಿ ಅವರನ್ನು ನೂತನ ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು.