ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ಟೌನ್ನ 2024-25ನೇ ಸಾಲಿನ ಅಧ್ಯಕ್ಷ ದಿನೇಶ ಶೆಟ್ಟಿ, ಕಾರ್ಯದರ್ಶಿ ಪ್ರವೀಣ ಬನ್ಸಾಲಿ, ಖಚಾಂಜಿ ಸಂಗಮೇಶ ಹಂದಿಗೋಳ ಹಾಗೂ ತಂಡದ ಪದಗ್ರಹಣ ಸಮಾರಂಭ ಹುಬ್ಬಳ್ಳಿಯಲ್ಲಿ ಭಾನುವಾರ ನಡೆಯಿತು.
ಪದಗ್ರಹಣ ನೆರವೇರಿಸಿದ ರೋಟರಿ ಮಾಜಿ ಗವರ್ನರ್ಡಾ. ಜಾರಸನ್ ಫರ್ನಾಂಡೀಸ್ ಮಾತನಾಡಿ, ರೋಟರಿಯವರಿಗೆ ಯಾವುದೇ ಸಮಾಜಮುಖಿ ಕೆಲಸ ನೀಡಿದರೆ ಅದನ್ನು ತಕ್ಷಣ ನೆರವೇರಿಸುತ್ತಾರೆ. ಪೋಲಿಯೊ ಮುಕ್ತ ಪ್ರಪಂಚ ನಿರ್ವಿುಸಿದ ಸಾಧನೆ ರೋಟರಿಯದ್ದು ಎಂದರು.
ಉಪಾಧ್ಯಕ್ಷರಾಗಿ ಸಂಜಯ ಕುನ್ನತ್, ಜಂಟಿ ಕಾರ್ಯದರ್ಶಿ ವಿಶ್ವನಾಥ ಅಂಗಡಕಿ ಹಾಗೂ ಕ್ಲಬ್ನ ನಿರ್ದೇಶಕರು ಅಧಿಕಾರ ಸ್ವೀಕರಿಸಿದರು. ಪಾಲಿಕೆಯ ಸಿಬ್ಬಂದಿ ಮಲ್ಲವ್ವ, ಸಮಾಜ ಸೇವೆಗೆ ಪೊ›. ಎಂ. ಆರ್. ಪಾಟೀಲ, ಕ್ರೀಡೆಗೆ ಆನಂದಸಿಂಗ್ ಮೂಕಾಶಿ, ಗುಲ್ಜಾರ್ ಅಹಮ್ಮದ್ ಹಾಗೂ ಕ್ರಿಕೆಟ್ಗಾಗಿ ಗುರುದೀಪಸಿಂಗ್ ಅವರನ್ನು ಸನ್ಮಾನಿಸಲಾಯಿತು.
ಡಾ. ಸಬಿತಾ ಕಲ್ಯಾಣಪುರಕರ, ಸ್ವಾತಿ ಸಜ್ಜನ ಮತ್ತು ಮುಕೇಶ ಪಾಂಚಾಳ ಪರಿಚಯಿಸಿದರು. 2023-24ರ ಅಧ್ಯಕ್ಷ ರಾಜು ದೊಡ್ಡಮನಿ ಮತ್ತು ಶಿವಪ್ರಸಾದ ಲಕ್ಕಮನಹಳ್ಳಿ ಸಾಧನೆಗಳ ವರದಿ ನೀಡಿದರು. ರಕ್ಷಾ ಸತೀಶರಾವ್ ನೃತ್ಯ ಪ್ರದರ್ಶಿಸಿದರು. ವಿವೇಕ್ ನಾಯಕ, ಧೀರಜ್ ಮದನ, ಅಂಜಲಿ ಮೋಕಾಶಿ ನಿರೂಪಿಸಿದರು. ರೋಟರಿ ಕ್ಲಬ್, ಇನ್ನರ್ ವ್ಹೀಲ್ ಕ್ಲಬ್ನ ಸದಸ್ಯರು, ಹುಬ್ಬಳ್ಳಿ ಧಾರವಾಡ ಬಂಟ ಸಂಘದ ಪದಾಧಿಕಾರಿಗಳು ಹಾಗೂ ಆಹ್ವಾನಿತರು ಉಪಸ್ಥಿತರಿದ್ದರು.