ಜಿಲ್ಲೆ

ರೋಗಿಯೊಬ್ಬರಿಗೆ ಆಶಾ ಕಾರ್ಯಕರ್ತೆ ನೆರವು

ಸುಂಟಿಕೊಪ್ಪ: ಟಿಸಿಎಲ್ ತೋಟದಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಯೊಬ್ಬರಿಗೆ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಜ್ಯೋತಿ ಭಾಸ್ಕರ್ ನೆರವಿನ ಹಸ್ತ ನೀಡಿದರು.

ಟಿಸಿಎಲ್ ತೋಟದಲ್ಲಿ ಕಾರ್ಮಿಕರಾಗಿರುವ ಸುಜಾತಾ ಎಂಬವರ ಪುತ್ರ ಜೀವನ ಎಂಬಾತ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಅವರಿಗೆ ಮೊಟ್ಟೆ ಸೇರಿದಂತೆ ಪೌಷ್ಟಿಕ ಆಹಾರ, ಮಧುಮೇಹ ಪರೀಕ್ಷೆ ಯಂತ್ರವನ್ನು ನೀಡಿದ್ದಲ್ಲದೆ ಪ್ರತಿ ತಿಂಗಳು ಆರೈಕೆಗೆ ಸಹಾಯಹಸ್ತ ನೀಡುವುದಾಗಿ ಹೇಳಿದರು.