ತಲ್ಲೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಚ್​.ಕೆ.ಚೌರಡ್ಡಿ ಹಾಗೂ ಸವದತ್ತಿ ತಾಪಂ ಮಾಜಿ ಅಧ್ಯ ವಿನಯಕುಮಾರ ದೇಸಾಯಿ ಭೇಟಿ ನೀಡಿ ಪೇವರ್ಸ್​ ಪರಿಶೀಲಿಸಿದರು. ರವಿ ಗಾಣಿಗೇರ, ಎ.ವಿ.ಇಂಗಳೆ, ಆರ್​.ಬಿ.ಅಣ್ಣಿಗೇರಿ ಇತರರಿದ್ದರು. 
ಜಿಲ್ಲೆ

ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಿ


ತಲ್ಲೂರ: ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಚ್​.ಕೆ.ಚೌರಡ್ಡಿ ಹಾಗೂ ಸವದತ್ತಿ ತಾಪಂ ಮಾಜಿ ಅಧ್ಯ ವಿನಯಕುಮಾರ ದೇಸಾಯಿ ಇತ್ತೀಚೆಗೆ ಭೇಟಿ ನೀಡಿ ಪರಿಶೀಲಿಸಿದರು.

ಅಭಿವೃದ್ಧಿ ಅಧಿಕಾರಿ ಎಚ್​.ಕೆ.ಚೌರಡ್ಡಿ ಆಸ್ಪತ್ರೆ ದಾಖಲಾತಿ ಪರಿಶೀಲಿಸಿ ಮಾತನಾಡಿ, ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಆಸ್ಪತ್ರೆ ಆವರಣದಲ್ಲಿ ಅಳವಡಿಸಿರುವ ಪೇವರ್ಸ್​ ಕಳಪೆಯಾಗಿದ್ದು, ಗುಣಮಟ್ಟದ ಪೇವರ್ಸ್​ ಅಳವಡಿಸಬೇಕು. ಯಾವುದೇ ಲೋಪವಾಗದಂತೆ ನಿಗಾವಹಿಸಿ ಕಾಮಗಾರಿ ಮಾಡಬೇಕು. ಇಲ್ಲದಿದ್ದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಸವದತ್ತಿ ತಾಪಂ ಮಾಜಿ ಅಧ್ಯ ವಿನಯಕುಮಾರ ದೇಸಾಯಿ ಮಾತನಾಡಿ, ರಾಜ್ಯದ ವಿವಿಧೆಡೆ ಈಗಾಗಲೇ ಡೆಂ ಪ್ರಕರಣಗಳು ಸೇರಿ ನಾನಾ ಸಾಂಕ್ರಾಮಿಕ ರೋಗ ಆವರಿಸುತ್ತಿವೆ. ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ಆರಂಭದಲ್ಲೇ ಸೂಕ್ತ ಕ್ರಮ ಕೆಗೊಳ್ಳಬೇಕು. ಗ್ರಾಮದಲ್ಲಿ ಸಾರ್ವಜನಿಕರಿಗೆ ಡೆಂ ನಿಯಂತ್ರಣ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು. ಸಮಾಜ ಸೇವಕ ರವಿ ಗಾಣಿಗೇರ, ನಿವೃತ್ತ ಶಿಕ ಎ.ವಿ.ಇಂಗಳೆ, ಸಲಹಾ ಸಮಿತಿ ಸದಸ್ಯ ಆರ್​. ಬಿ.ಅಣ್ಣಿಗೇರಿ, ವೀರೇಶ ದೇಮಶೆಟ್ಟಿ, ಎಸ್​.ಎಸ್​.ಉಪ್ಪಿನ ಇತರರು ಇದ್ದರು.