ಸಂಡೂರು: ಕುರೇಕುಪ್ಪ ಪುರಸಭೆ ವ್ಯಾಪ್ತಿಯಲ್ಲಿ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಸೋಮವಾರ ಸ್ವಚ್ಛತಾ ಅಭಿಯಾನ ನಡೆಯಿತು.
ಸದಸ್ಯ ಎನ್.ಸೋಮಪ್ಪ ಮಾತನಾಡಿ, ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮನೆಯಲ್ಲಿಯೇ ಒಣ ಮತ್ತು ಹಸಿ ಕಸ ಬೇರೆ ಮಾಡಿ ಪುರಸಭೆ ತ್ಯಾಜ್ಯ ವಿಲೇವಾರಿ ವಾಹನದಲ್ಲಿ ಹಾಕಬೇಕು. ಈ ಮೂಲಕ ರೋಗಮುಕ್ತ ಕುರೇಕುಪ್ಪಕ್ಕೆ ಸಹಕರಿಸಬೇಕೆಂದರು. ಅಭಿಯಾನದ ಅಂಗವಾಗಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಣೆ ಮಾಡಲಾಯಿತು.