oplus_2 
ಜಿಲ್ಲೆ

ರೋಗಗಳ ತಡೆ ನಿಟ್ಟಿನಲ್ಲಿ ಲಸಿಕೆಗಳ ಪಾತ್ರ ಹಿರಿದು

ಚಿತ್ರದುರ್ಗ: ಆರೋಗ್ಯ ಇಲಾಖೆ, ಜಿಲ್ಲಾಸ್ಪತ್ರೆ ಹಾಗೂ ಹಜ್ ಸಮಿತಿ ಸಹಯೋಗದೊಂದಿಗೆ ನಗರದ ಎಂಕೆ ಪ್ಯಾಲೇಸ್‌ನಲ್ಲಿ ಬುಧವಾರ ಜಿಲ್ಲೆಯ 99 ಹಜ್ ಯಾತ್ರಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ವಿವಿಧ ಲಸಿಕೆ ನೀಡುವ ಕಾರ್ಯಕ್ರಮ ನಡೆಯಿತು.

ಯಾತ್ರಾರ್ಥಿಗಳಿಗೆ ಶುಭಕೋರಿ ಮಾತನಾಡಿದ ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಡಿ.ಎಂ. ಅಭಿನವ್, ರೋಗಗಳ ತಡೆ ನಿಟ್ಟಿನಲ್ಲಿ ಲಸಿಕೆಗಳು ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದರು.

ಡಿಎಸ್ ಡಾ.ಎಸ್.ಪಿ. ರವೀಂದ್ರ ಲಸಿಕೆಗಳ ಮಹತ್ವ ವಿವರಿಸಿದರು. ಯಾತ್ರಾರ್ಥಿಗಳಿಗೆ ಆರೋಗ್ಯ ರಕ್ಷಣೆ ಕುರಿತಂತೆ ಮುಂಜಾಗ್ರತಾ ಕ್ರಮಗಳ ತರಬೇತಿ ನೀಡಲಾಯಿತು.

ಕುಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಜಿಲ್ಲಾ ಹಜ್ ಸಮಿತಿ ವ್ಯವಸ್ಥಾಪಕ ಹಾಜಿ ದಾದಾಪೀರ್, ರಾಜ್ಯಹಜ್ ಸಮಿತಿ ಸಂಯೋಜಕ ಸೈಯದ್ ನಾಸೀರ್, ಡಾ. ಸತೀಶ್, ಡಾ. ಶಿಲ್ಪಾ, ಡಾ. ಬಿಲಾಲ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ, ಜಿಲ್ಲಾ ಲಸಿಕಾ ವ್ಯವಸ್ಥಾಪಕ ವೀರೇಶ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಎಂ. ಗಂಗಾಧರ್, ಗುರುಮೂರ್ತಿ ಇತರರು ಇದ್ದರು.