ಬಾಗಲಕೋಟೆ: ವೈದ್ಯಕೀಯ ರಂಗದಲ್ಲಿ ಪ್ರತಿಯೊಬ್ಬ ವೈದ್ಯನು ರೋಗನಿರ್ಣದ ವಿಧಾನಗಳನ್ನು ಅರಿತುಕೊಳ್ಳುವುದು ಅತ್ಯವಶ್ಯಕ ಎಂದು ಬೆಳಗಾವಿ ಕೆಎಲ್‌ಇ ಆಯುರ್ವೇದ ಕಾಲೇಜಿನ ಡಾ.ಮಂಜುಳಾ ಕೆ. ಹೇಳಿದರು.
ನಗರದ ಎಂಆರ್‌ಎನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಮೂರು ದಿನಗಳ ರಾಜ್ಯಮಟ್ಟದ ವಿಷಯವಾರು ದೃಷ್ಟಿಕೋನ ಕಾರ್ಯಗಾರದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಪ್ರತಿಯೊಬ್ಬ ವೈದ್ಯರು ರೋಗಿಯ ರೋಗ ನಿರ್ಣಯಿಸುವಂತಹ ವಿಧಾನಗಳನ್ನು ಕಲಿತುಕೊಂಡಾಗ ಮಾತ್ರ ಶ್ರೇಷ್ಠ ವೈದ್ಯರಾಗಲು ಸಾಧ್ಯ ಎಂದರು.
ಉಡುಪಿಯ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕ ಡಾ. ಅರುಣ ಕುಮಾರ ಎಂ. ಮಾತನಾಡಿ, ರೋಗ ಶಾಸ್ತ್ರೀಯ ಪರೀಕ್ಷೆಗಳು ಹಾಗೂ ಪ್ರಯೋಗಾಲಯಗಳನ್ನು ಬಳಸುವ ವಿಧಾನವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ರಾಜ್ಯದ ಅಂದಾಜು ೭೫ಕ್ಕೂ ಹೆಚ್ಚು ಆಯುರ್ವೇದಿಕ ಮಹಾವಿದ್ಯಾಲಯದ ಪ್ರಾಧ್ಯಾಪಕರುಗಳು ಭಾಗವಹಿಸಿದ್ದರು. ತೇಜಸ್ ಸಂಸ್ಥೆಯ ಅಧ್ಯಕ್ಷೆ ಮಾಧುರಿ ಮುಧೋಳ, ಆಯುರ್ವೇದಿಕ ಕಾಲೇಜಿನ ಡೀನ್ ಡಾ.ಶಿವಕುಮಾರ ಗಂಗಾಲ, ಪ್ರಾಚಾರ್ಯ ಡಾ. ಪ್ರಲ್ಹಾದ ಗಂಗಾವತಿ, ಪ್ರಾಧ್ಯಾಪಕರಾದ ಡಾ. ದೀಪಾ ಗಂಗಾಲ, ಡಾ. ಈಶ್ವರ ಪಾಟೀಲ, ಡಾ. ಸಂಜಯ ಚಿನಿವಾಲ, ಡಾ.ವೀಣಾ ಕುಲಕರ್ಣಿ, ಡಾ.ಅಶ್ವಿನಿ ಹೊಸಮನಿ, ಡಾ.ರಜನಿ ದಡೆದ, ಡಾ.ರೇಖಾ ಸಕ್ಕರಿ ಉಪಸ್ಥಿತರಿದ್ದರು.