ಜಿಲ್ಲೆ

ರೋಗ ನಿರೋಧಕ ಶಕ್ತಿ ವೃದ್ಧಿಸುವ ಮಾತ್ರೆ ವಿತರಣೆ

ಕಲಬುರಗಿ: ಎಚ್ ಕೆ ಇ ಸಂಸ್ಥೆಯ ಮಾಲಕರಡ್ಡಿ ಹೋಮಿಯೋಪಥಿ ಆಸ್ಪತ್ರೆ ಸಹಯೋಗದಲ್ಲಿ ಕೋವಿಡ್-19 ವಿರುದ್ಧ ರೋಗ ನಿರೋಧಕ ಶಕ್ತಿ ವೃದ್ಧಿಸುವ ಹೋಮಿಯೋಪಥಿ ಮಾತ್ರೆಗಳನ್ನು ಶುಕ್ರವಾರ ಉಚಿತವಾಗಿ ವಿತರಿಸಲಾಯಿತು.
ವಾಡರ್್ 2, 13ರಡಿ ಬರುವ ಜಮ್ಜಮ್ ಕಾಲನಿ, ಅಹ್ಮದ್ ರಜಾ ಕಾಲನಿಯಲ್ಲಿ ಮಾತ್ರೆ ವಿತರಿಸಿದ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಸೈಯದ್ ಜಾಫರ್ ಹುಸೇನ್ ಮಾತನಾಡಿ, ಕರೊನಾಕ್ಕೆ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳುವುದೇ ಔಷಧ. ಎಲ್ಲರೂ ರೋಗ ನಿರೋಧಕ ಶಕ್ತಿ ವೃದ್ಧಿಸುವ ಮಾತ್ರೆ ಸೇವಿಸಿ ವೈರಸ್ ಹರಡದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಮಾತ್ರೆ ಸೇವಿಸುವುದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲ. ಆರು ತಿಂಗಳ ಮಗು, ಗರ್ಭಿಣಿ, ರಕ್ತದೊತ್ತಡ, ಸಕ್ಕರೆ ಕಾಯಿಲೆ ಇದ್ದಂತಹವರೂ ಸೇವಿಸಬಹುದು ಎಂದು ವೈದ್ಯರು ದೃಢಪಡಿಸಿದ ನಂತರವೇ ಮಾತ್ರೆಗಳನ್ನು ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ 4-5 ಲಕ್ಷ ಮಾತ್ರೆ ವಿತರಿಸಲಾಗಿದೆ ಎಂದು ತಿಳಿಸಿದರು.
ಮಾಲಕರಡ್ಡಿ ಹೋಮಿಯೋಪಥಿ ಕಾಲೇಜಿನ ಪ್ರಾಚಾರ್ಯ ಡಾ.ಪಿ.ಸಂಪತಕುಮಾರ, ವೈದ್ಯಕೀಯ ಅಧೀಕ್ಷಕ ಡಾ.ರಾಜೇಂದ್ರ ಪಾಟೀಲ್, ಸಮೀ ಸಾಬ್, ಮೊಹ್ಮದ್ ಅಲೀಮ್ ಇನಾಮದಾರ್, ಶಿರಾಜ್ ಭಾಯ್, ಅಬ್ದುಲ್ ಮುಖಿಂ, ಎಂ.ಎ. ಗಫೂರ್ ಜಿಲಾನಿ, ಮಹ್ಮದ್ ಮುಜೀದ್ ಅಲಿಖಾನ್, ಅಬ್ದುಲ್ ಗಫಾರ್, ಶದಾಬ್ ಮಲಿಕ್, ಡಾ.ಸೈಯದ್ ರೆಹಮತ್ ಉಲ್ಲಾ, ಮಹ್ಮದ್ ಅಲ್ ಹುಸೇನಿ, ಅಬ್ದುಲ್ ಅನಾನ್ ಪಟೇಲ್, ಜಿಯಾಜ್ ಸಾಬ್, ಶಹಬಾಜ್, ಕರೀಂಭಾಯ್ ಇದ್ದರು.